ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕುಂಭಮೇಳದ #Kumbhamela ಸಮಯದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್’ಎಂವಿಟಿ) ನಿಂದ ಬನಾರಸ್’ಗೆ #Sir M Vishveshwaraiah Terminal to Banaras ಏಕಮಾರ್ಗ ವಿಶೇಷ ರೈಲನ್ನು ನೈಋತ್ಯ ರೈಲ್ವೆ #SouthWesternRailway Special Train ಓಡಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ವಿವರಗಳು ಇಂತಿವೆ.
ಒನ್-ವೇ ವಿಶೇಷ ರೈಲು (06579) ಜನವರಿ 23 ರಂದು ಮಧ್ಯಾಹ್ನ 1:00 ಗಂಟೆಗೆ ಎಸ್’ಎಂವಿಟಿ ಬೆಂಗಳೂರಿನಿAದ ಹೊರಟು, ಜನವರಿ 25, 2025 ರಂದು ಮಧ್ಯಾಹ್ನ 1:30ಕ್ಕೆ ತನ್ನ ಬನಾರಸ್ ತಲುಪಲಿದೆ.
Also read: ಯಲ್ಲಾಪುರ | ಲಾರಿ ಪಲ್ಟಿಯಾಗಿ ಅಪಘಾತ | 10 ಮಂದಿ ದುರ್ಮರಣ | ಘಟನೆ ಹೇಗಾಯ್ತು?
ಮಾರ್ಗ ಯಾವುದು?
ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ರಾಣಿಬೆನ್ನೂರು, ಎಸ್’ಎಂಎಂ ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಘಟಪ್ರಭಾ, ರಾಯಬಾಗ, ಮೀರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಾಡ್, ಸತಾರಾ, ಪುಣೆ, ಅಹ್ಮದ್ ನಗರ, ಕೋಪರ್ಗಾಂವ್, ಮನ್ಮಾಡ್ ಭೂಸಾವಲ್, ಇಟಾಸಿರ್, ಜಬಲ್ಪುರ್, ಸತ್ನಾ, ಮಾಣಿಕ್ಪುರ್, ಪ್ರಯಾಗರಾಜ್ ಛೋಕಿ, ಮಿರ್ಜಾಪುರ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಒನ್ ವೇ ಸ್ಪೆಷಲ್ ನಲ್ಲಿ 01 ಜನರಲ್ ಸೆಕೆಂಡ್ ಕ್ಲಾಸ್, 17 ಸ್ಲೀಪರ್ ಕ್ಲಾಸ್ ಮತ್ತು 02 ಜನರಲ್ ಲಗೇಜ್ ಮತ್ತು ದಿವ್ಯಾಂಗ ಸ್ನೇಹಿ ಕೋಚ್ ಸೇರಿದಂತೆ 20 ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post