ಕಲ್ಪ ಮೀಡಿಯಾ ಹೌಸ್ | ಯಲ್ಲಾಪುರ |
ಸಂತೆ ವ್ಯಾಪಾರಕ್ಕಾಗಿ ತೆರಳುತ್ತಿದ್ದ ವೇಳೆ ಪಲ್ಟಿಯಾದ ಲಾರಿಯ ಅಡಿಯಲ್ಲಿ ಮೂಟೆ ಹಾಗೂ ರಾಶಿ ಬಿದ್ದಿದ್ದ ತರಕಾರಿಗಳ ಅಡಿಯಲ್ಲಿ ಜನರಿದ್ದಾರೆ ಎಂಬ ವಿಚಾರ ಸುಮಾರು 1 ಗಂಟೆ ನಂತರ ತಿಳಿದುಬಂದಿದ್ದು, ಉಸಿರುಗಟ್ಟೆ ಅವರೆಲ್ಲಾ ಮೃತರಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ #SP Narayan ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಂತೆ ವ್ಯಾಪಾರಕ್ಕಾಗಿ ಹಣ್ಣು ಮತ್ತು ತರಕಾರಿಗಳನ್ನು ತುಂಬಿಕೊಂಡು ಕುಮಟಾ ಕಡೆಗೆ ಬರುತ್ತಿದ್ದ ಲಾರಿ ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭಿಸಿದೆ ಎಂದಿದ್ದಾರೆ.
Also read: ಕುಂಭಮೇಳಕ್ಕೆ ಹೋಗೋ ಪ್ಲಾನ್ ಇದೆಯಾ? ಇಲ್ಲಿದೆ ಮತ್ತೊಂದು ಜ.23ರಂದು ವಿಶೇಷ ರೈಲು | ಮಾರ್ಗ ಯಾವುದು
ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ #Terrible Lorry Accident near Yellapura NH ಸವಣೂರಿನಿಂದ ಕುಮಟಾ ಕಡೆಗೆ ಸಂತೆ ವ್ಯಾಪಾರಕ್ಕಾಗಿ ಹಣ್ಣು ಮತ್ತು ತರಕಾರಿಗಳನ್ನು ತುಂಬಿದ್ದ ಲಾರಿಯು ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದು 5 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎಂದಿದ್ದಾರೆ.
ದಟ್ಟ ಮಂಜು #Thick Fog ಇದ್ದ ಕಾರಣ ಅಪಘಾತ ಸಂಭವಿಸಿದೆ. ಮಂಜು ಮುಸುಕಿದ್ದರಿಂದ ಎದುರಿಗೆ ಬರುತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಲಾರಿ ಪಲ್ಟಿಯಾಗಿದೆ. ವಾಹನದಲ್ಲಿ ಹಣ್ಣು, ತರಕಾರಿಗಳಿತ್ತು. 28 ಜನ ಪ್ರಯಾಣಿಸುತಿದ್ದರು. ಲಾರಿ ಪಲ್ಟಿಯಾದ ಕಾರಣ ಜನರ ಮೇಲೆ ತರಕಾರಿ ಬಿದ್ದು ಉಸಿರುಗಟ್ಟಿ 9 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಲಾರಿ ಅಪಘಾತವಾಗಿ 1 ಗಂಟೆ ನಂತರ ಮಾಹಿತಿ ದೊರೆತಿದೆ. ಅಲ್ಲಿಯವರೆಗೂ ಲಾರಿಯಲ್ಲಿ ಜನರಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಕ್ರೇನ್ ತಂದು ಲಾರಿ ಮೇಲೆತ್ತಿದಾಗ ಜನರಿರುವುದು ಗೊತ್ತಾಯ್ತು. ಆಗಲೇ 9 ಜನ ಸ್ಥಳದಲ್ಲೇ ಸಾವು ಕಂಡಿದ್ದರು. ತP್ಷÀಣ ಉಳಿದವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯವಾದವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಒಟ್ಟು 10 ಜನ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣದ ಘಟನಾ ಸ್ಥಳವನ್ನು ಪರಿಶೀಲಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿ, ಹಾಜರಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೆಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post