ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸುಮಾರು 40 ವರ್ಷಗಳ ಒಡನಾಟದಲ್ಲಿ ನಾ ಕಂಡಂತಹ ಸರಳ ವ್ಯಕ್ತಿತ್ವದ ಪ್ರತೀಕ ಪೂಜ್ಯ ದೊರೆಸ್ವಾಮಿಯವರು ಎಂದು ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಅವರು ಕಂಬನಿ ಮಿಡಿದಿದ್ದಾರೆ.
ಇತ್ತೀಚೆಗೆ ನಿಧನರಾದ ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಗೆ ಅಶ್ರುತರ್ಪಣ ಸಲ್ಲಿಸಿ, ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ದೊರೆಸ್ವಾಮಿಯವರೊಂದಿಗೆ ಸುಮಾರು ನಲವತ್ತು ವರುಷಗಳಿಂದ ನಿಕಟ ಸಂಪರ್ಕ ಹೊಂದಿದ ಬೆಂಗಳೂರು ವರದಿಗಾರರಲ್ಲಿ ನಾನೂ ಒಬ್ಬ. ಐದು ವರ್ಷದ ಹಿಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯ ಬೆಂಗಳೂರು ವರದಿಗಾರರ ತಂಡಡ ಸಮೀಕ್ಷೆಯನ್ನು ಪೂಜ್ಯ ದೊರೆಸ್ವಾಮಿಗಳಿಗೆ ಅರ್ಪಿಸಿ ಸಾರ್ಥಕತೆ ಕಂಡವರು ನಾವು. ಅವರ ಸ್ಮರಣೆಗೆ ನಮನಗಳು ಎಂದಿದ್ದಾರೆ.
ಶೇಷಚಂದ್ರಿಕ ಅವರೊಂದಿಗೆ ಶೇಷಣ್ಣ, ಟಿ.ಎಸ್. ರಂಗಣ್ಣ ಅವರುಗಳು ನಮ್ಮ ನಡುವೆ ಇರುವ ಮಾಧ್ಯಮ ಕ್ಷೇತ್ರದ ಕೆಲವೇ ಹಿರಿಯರಲ್ಲಿ ಓರ್ವ ಸವ್ಯಸಾಚಿ ವ್ಯಕ್ತಿತ್ವ. ಅವರು ಪತ್ರಿಕೆ, ಆಕಾಶವಾಣಿ ಮತ್ತು ದೂರದರ್ಶನ ಸಂಸ್ಥೆಗಳಲ್ಲಿ ಅನನ್ಯ ಸೇವೆ ಸಲ್ಲಿಸಿದವರು.
ಅಂದಿನ ಪ್ರಧಾನಿ ದಿ.ಪಿ.ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ಮಾಧ್ಯಮ ತಂಡದ ಸದಸ್ಯರಾಗಿ ವಿದೇಶಿ ಪ್ರವಾಸದಲ್ಲಿ ಪ್ರಧಾನ ಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳ ವರದಿ ಹೊಣೆಗಾರಿಕೆ ಹೊತ್ತಿದ್ದರು. ಅವರ ಸಂಪರ್ಕಕ್ಕೆ ಬರದ ವ್ಯಕ್ತಿ ವಿಶೇಷಗಳಿಲ್ಲ. ಈಗ ಅವರು ಹಿರಿಯ ದೊರೆಸ್ವಾಮಿ ಅವರ ಸಂಗಡ ಇದ್ದ ಭಾವಚಿತ್ರ ಸ್ಮರಿಸಿಕೊಂಡಿದ್ದಾರೆ. ದೊರೆಸ್ವಾಮಿ ಅವರ ನಿಧನಕ್ಕೆ ಕಲ್ಪ ನ್ಯೂಸ್ ಕೂಡ ಕಂಬನಿ ಮಿಡಿಯುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post