ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಮಾರು 25-30 ವರ್ಷಗಳ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಕಮಾಲ್ ಮಾಡಿದ್ದ ಡಬ್ಬಲ್ ಡೆಕ್ಕರ್ ಬಸ್’ಗಳನ್ನು Double Dekker Bus ಈಗ ಮತ್ತೆ ಹೊಸ ರೂಪದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ಸಿದ್ದತೆ ನಡೆಸಿದೆ.
ಹೌದು… 10 ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್ ಬಸ್’ಗಳನ್ನು ಗ್ರಾಸ್ ಕಾಂಟ್ರಾಕ್ಟ್ ಕ್ಯಾರೇಜ್ (ಜಿಸಿಸಿ) ಮಾದರಿಯಲ್ಲಿ ಪಡೆಯಲು ಟೆಂಡರ್ ಪ್ರಕ್ರಿಯೆಗೆ ಬಿಎಂಟಿಸಿ ಚಾಲನೆ ನೀಡಿದ್ದು, ಪ್ರಯಾಣಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.

Also read: ಬೀರೂರು ಪೊಲೀಸರ ಭರ್ಜರಿ ಬೇಟೆ | ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಸಹಿತ ಕಳ್ಳನ ಬಂಧನ
ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿಯ ಅನುದಾನದಿಂದ ಪಡೆಯಲು ಬಿಎಂಟಿಸಿ ಈ ಬಸ್’ಗಳನ್ನು ಓಡಿಸಲು ಮುಂದಾಗಿದೆ.

- ಯೋಜನೆಯಂತೆ ಇದು ಎಲೆಕ್ಟ್ರಿಕ್ ಬಸ್’ಗಳಾಗಿದ್ದು, ಪ್ರತಿದಿನ 150 ಕಿಮೀವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.
- ಎಲೆಕ್ಟ್ರಿಕ್ ಬಸ್’ಗಳು ಮೆಜೆಸ್ಟಿಕ್ ಸುಭಾಷ್ ನಗರ ಡಿಪೋದಿಂದಲೇ ಕಾರ್ಯಾಚರಣೆ ಮಾಡಲಾಗುತ್ತದೆ.
- ಹೊರವರ್ತುಲ ರಸ್ತೆ ಸೇರಿ ಮರಗಳು, ಕೇಬಲ್’ಗಳು ಅಡ್ಡ ಬರದಿರುವ ಮಾರ್ಗದಲ್ಲಿ ಮಾತ್ರ ಈ ಬಸ್’ಗಳು ಸಂಚರಿಸಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post