ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲೇ ಹೆಸರುವಾಸಿಯಾದ ಧನ್ವಂತರಿ ಎಂದೇ ಖ್ಯಾತರಾದ ಡಾ. ಮಂಜುನಾಥ್ Dr. Manjunath ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಈ ಅಧಿಕೃತವಾಗಿದ್ದು, ಈ ಮೂಲಕ ಹಲವು ದಿನಗಳಿಂದ ಊಹಾಪೋಹಗಳು ಸತ್ಯವಾಗಿವೆ.
ಈ ಕುರಿತಂತೆ ಸ್ವತಃ ಮಾಧ್ಯಮಗಳಿಗೆ ಮಾತನಾಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ B S Yadiyurappa ಅವರು ಅಧಿಕೃತವಾಗಿ ಘೋಷನೆ ಮಾಡಿದ್ದಾರೆ.
ಲೆಕ್ಕವಿಲ್ಲಷ್ಟು ಬಡಜನರ ಜೀವ ಉಳಿಸಿ, ದೇವರೇ ಆಗಿರುವ ಮಂಜುನಾಥ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವುದು ಸಂತೋಷವಾಗಿದ್ದು, ಪಕ್ಷಕ್ಕೆ ದೊಡ್ಡ ಬಲ ಬಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಅವರೊಂದಿಗೆ ಚರ್ಚೆಯೂ ಆಗಿದೆ. ಒಂದೆರಡು ದಿನಗಳಲ್ಲಿ ಅವರು ಅಧಿಕೃತವಾಗಿ ಪಕ್ಷ ಸೇರಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.
Also read: ಬಿಜೆಪಿಗೆ ಡಾ.ಮಂಜುನಾಥ್ | ಚುನಾವಣಾ ಸ್ಪರ್ಧೆ ಈಗ ಅಧಿಕೃತ | ಯಡಿಯೂರಪ್ಪ ಘೋಷಣೆ
ಈ ಕುರಿತಂತೆ ಮಾತನಾಡಿರುವ ಡಾ. ಮಂಜುನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವದಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಮೋದಿಯವರ ಜನಪ್ರಿಯತೆ ಹಾಗೂ ಅವರ ಆಡಳಿತ ದೇಶಕ್ಕೆ ಮುಂದುವರೆಯಬೇಕಿದೆ. ಇದಕ್ಕಾಗಿ ಕೈ ಬಲಪಡಿಸಲು ಮುಂದಾಗಿದ್ದೇನೆ ಎಂದರು.
ಆರೋಗ್ಯ ಕ್ಷೇತ್ರದ ಸೇವೆಯಲ್ಲಿ ಇಷ್ಟು ವರ್ಷ ಹಲವು ಆಯಾಮಗಳನ್ನು ಕಂಡಿದ್ದೇವೆ. ಹೃದ್ರೋಗ ಚಿಕಿತ್ಸೆಗೆ ಹೊಸರೂಪ ನೀಡಿದ್ದೇವೆ. ಇದನ್ನು ದೇಶವ್ಯಾಪಿ ವಿಸ್ತರಿಸುವ ಆಶಯವಿದೆ. ಇದೇ ವಿಚಾರಗಳನ್ನು ರಾಷ್ಟ್ರದಾದ್ಯಂತ ನಮ್ಮ ಅನೇಕ ಸ್ನೇಹಿತರು ಹೇಳಿದ್ದಾರೆ ಎಂದರು.
ಎಲ್ಲ ವಿಚಾರಗಳನ್ನು ಕೂಲಂಕಶವಾಗಿ ಚಿಂತಿಸಿ, ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗಿದ್ದು, ಒಂದೆರಡು ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದರು.
ಇದಕ್ಕೂ ಮುನ್ನ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ ಮಂಜುನಾಥ್ ಅವರು ಹಲವು ಕಾಲ ಮುಖಂಡರೊAದಿಗೆ ಚರ್ಚೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post