ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗುರುಪೂರ್ಣಿಮೆಯ ಪುಣ್ಯ ದಿನದಂದು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಂತಹ ಮೈಸೂರು ರಸ್ತೆಯ ಕುಂಬಳಗಳೊಡಿನಲ್ಲಿರುವ ಡಾನ್ಬಾಸ್ಕೋ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಪಿಯುಸಿ ಕಾಮರ್ಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 16 ನೇ ರ್ಯಾಂಕ್ ಪಡೆದ ಭೂಮಿಕಾ, 17 ನೇ ರ್ಯಾಂಕ್ ಪಡೆದ ಪ್ರಗತಿ ಬಿ.ಎಸ್, 21 ನೇ ರ್ಯಾಂಕ್ ಪಡೆದ ವಲ್ಲಭ್ ಗಣೇಶ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ, ಕ್ಯಾಂಪಸ್ ರಿಕ್ರೂಟ್ಮೆಂಟ್ ನಲ್ಲಿ ವಿವಿಧ ಕಂಪನಿಗಳಿಗೆ ಆಯ್ಕೆಯಾದಂತಹ ಎಂಬಿಎ ಮತ್ತು ಬಿಕಾಂ, ಬಿಸಿಎ, ಬಿಬಿಎ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ರಾಘವ್ ಬೈಲಪ್ಪ ಅಭಿನಂದಿಸಿ, ಅವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
Also read: 2022ರ ಎನ್‌ಐಆರ್‌ಎಫ್ ರ‍್ಯಾಂಕಿಂಗ್: ಕುವೆಂಪು ವಿಶ್ವವಿದ್ಯಾಲಯಕ್ಕೆ 86ನೇ ರ‍್ಯಾಂಕ್
ಕಾರ್ಯಕ್ರಮದಲ್ಲಿ ಮೈಸೂರು ರಸ್ತೆಯ ಕುಂಬಗಳೊಡಿನಲ್ಲಿರುವ ಡಾನ್ಬಾಸ್ಕೋ ಸಂಸ್ಥೆಯ ಅಧ್ಯಕ್ಷರಾದ ಬಿ. ಬೈಲಪ್ಪ, ಉಪಾಧ್ಯಕ್ಷರಾದ ಪಿ.ಬಿ ಮಂಜುನಾಥ್, ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳೂ ಉಪಸ್ಥಿತರಿದ್ದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















