No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Thursday, September 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ: ಬಸವರಾಜ ಬೊಮ್ಮಾಯಿ

kalpa News by kalpa News
May 6, 2025
in ಬೆಂಗಳೂರು ನಗರ
0
ಉತ್ತಮ ಆಡಳಿತದ ಫಲ ಗುಜರಾತ್ ಚುನಾವಣಾ ಫಲಿತಾಂಶ : ಸಿಎಂ ಬೊಮ್ಮಾಯಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ವರದಿ: ಡಿ.ಎಲ್. ಹರೀಶ್

ಬಸವಣ್ಣನವರು #Basavanna ದಯವೇ ಧರ್ಮದ ಮೂಲವಯ್ಯ ಅಂತ ಒಂದೇ ಪದದಲ್ಲಿ ಹೇಳಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ. ಬಸವಣ್ಣನ ತತ್ವ ಪಾಲಿಸಿದರೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavanna Bommai ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಬೆಂಗಳೂರು ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವಣ್ಣ ಒಬ್ಬ ವಿಸ್ಮಯ ವ್ಯಕ್ತಿ. ಯಾರಾದರು ಬಸವಣ್ಣನನ್ನು ಪರಿಪೂರ್ಣ ವಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರೆ ಆ ವ್ಯಕ್ತಿಗೆ ಇನ್ನೂ ಪರಿಪೂರ್ಣತೆ ಬಂದಿಲ್ಲ ಎಂದರ್ಥ. ಬಸವಣ್ಣ ಅಂದಿಗೂ ಪ್ರಸ್ತುತ ಇಂದಿಗೂ ಪ್ರಸ್ತುತ. ಒಂದು ಆಯಾಮದಲ್ಲಿ ಅವನು ಆಗಿನ ವಾಸ್ತವದ ಬಗ್ಗೆ ಮಾತನಾಡಿದ್ದರು. ಇನ್ನೊಂದು ಆಯಾಮದಲ್ಲಿ ಬಸವಣ್ಣ ಅಸಮಾನತೆ, ತಾರತಮ್ಯದ ವಿರುದ್ದ ಮಾತನಾಡಿದ್ದರು. ಅವು ಇಂದಿಗೂ ಜೀವಂತವಾಗಿವೆ ಎಂದರೆ ಸಂತೋಷ ಪಡುವ ವಿಷಯವಲ್ಲ. ಇವತ್ತು ನಮ್ಮ ಸಮಾಜದಲ್ಲಿ ನಡೆಯುತ್ತಿರುವದನ್ನು ನೋಡಿದಾಗ ಬಸವಣ್ಣನವರ ಚಿಂತನೆಗೆ ನಾವು ಎಷ್ಟು ಗೌರವ ಕೊಟ್ಟಿದ್ದೇವೆ ಎನ್ನುವುದು ಅರಿವಿಗೆ ಬರುತ್ತದೆ ಎಂದರು.

ಸಮಾಜದಲ್ಲಿ ಮೂರು ಥರದ ವ್ಯಕ್ತಿಗಳು ಇರುತ್ತಾರೆ. ಕೆಲವರು ಭೂತಕಾಲದ ಬಗ್ಗೆ ಮಾತನಾಡುತ್ತಾರೆ. ಅವರು ವಾಸ್ತವದ ಬಗ್ಗೆ ಮಾತನಾಡುವುದೇ ಇಲ್ಲ. ಎರಡನೇಯವರು ಕ್ರಾಂತಿಕಾರಿಗಳಾಗಿರುತ್ತಾರೆ. ಶರಣರ ಕ್ರಾಂತಿ, ಸ್ವಾತಂತ್ರ್ಯ ಹೋರಾಟ, ರಷ್ಯನ್‌ಕ್ರಾಂತಿ ಯಾಕೆ ಬಹಳ ದಿನ ಉಳಿಯಲಿಲ್ಲ. ಆ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ನಾವು ವಿಫಲರಾಗಿದ್ದೇವೆ. ಬಸವಣ್ಣ ಕ್ರಾಂತಿ ಕಾರಿ ಅಂತ ಹೇಳುತ್ತೇವೆ. ಆದರೆ, ಆತ ಮಾಡಿದ‌ ಕ್ರಾಂತಿ ಏನಾಯಿತು ಎಂದು ನೋಡಬೇಕು ಎಂದರು.

https://kalpa.news/wp-content/uploads/2025/03/PES-Video.mp4

ಇನ್ನೊಬ್ಬರು ರಿಫಾರ್ಮರ್ಸ್ ಇದರಲ್ಲಿ ಬುದ್ದ, ಬಸವ, ಮಹಾವೀರ ಅವರು ಕಾಲ ಮೀರಿ ಬದುಕುತ್ತಾರೆ. ಅಂತಹ ಶ್ರೇಷ್ಠ ವ್ಯಕ್ತತ್ವ ಹೊಂದಿರುವ ಇತಿಹಾಸಕ್ಕೆ ನಾವು ಸೇರಿದ್ದೇವೆ. ಅದರ ಅರಿವಿಲ್ಲದೆ ನಾವು ತಾತ್ಕಾಲಿಕ ಲೋಕದಲ್ಲಿದ್ದರೆ ನಮಗೆ ಮೂಲ ಆಳದ ಬಗ್ಗೆ ಅರಿವು ಇರುವುದಿಲ್ಲ ಎಂದರು.

ಒಂದು ಬಾವಿ ಪಕ್ಕದಲ್ಲಿ ಹಳ್ಳ ಇತ್ತು. ಅದು ಬಾವಿಗೆ‌ ನೀನು ನಿಂತಲ್ಲೆ ನಿಂತಿದ್ದೀಯಾ, ನಾನು ಹರಿದು ಎಲ್ಲರಿಗೂ ನೀರು ಕೊಡುತ್ತೇನೆ ನಾನೇ ಶ್ರೇಷ್ಠ ಎಂದು ಹೆಳುತ್ತದೆ. ಅದಕ್ಕೆ ಬಾವಿ ನಾನು ಆಳವಾಗಿ ಒಂದೇ ಕಡೆ ಇದ್ದು ಜನರ ಸಂಕಷ್ಟಕ್ಕೆ ಆಗುತ್ತೇನೆ ಎಂದು ಹೇಳುತ್ತದೆ. ಅದೆ ರೀತಿ ವಚನ ಸಾಹಿತ್ಯ, ಯಾವುದೇ ವೇದ ಪುರಾಣಕ್ಕೂ ಕಡಿಮೆ ಇಲ್ಲದ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಇದೆ ಎಂದರು.
ಬಸವಣ್ಣನವರು  ದಯವೇ ಧರ್ಮದ ಮೂಲವಯ್ಯ ಅಂತ ಒಂದೆ ಪದದಲ್ಲಿ ಹೇಳಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ. ಇಷ್ಟೆಲ್ಲ ನಮ್ಮ ಸುತ್ತಲೂ ನಡೆಯುತ್ತಿದ್ದರೂ ನಾವು ಏನೂ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕತೆ ಮೂಡುತ್ತಿದೆ. ಅದು ಮೂಡಬಾರದು. ಬಸವ ಸಾಹಿತ್ಯ ಓದಬೇಕು, ಅದನ್ನು ಪ್ರಚಾರ ಮಾಡುವ ಮೂಲಕ ಶಾಂತಿ ಸ್ಥಾಪಿಸಬೇಕು. ರೇಣುಕಾಚಾರ್ಯ ಮಾನವ ದರ್ಮಕ್ಕೆ ಜಯವಾಗಲಿ ಎಂದರು. ನಾವು ಮೂಲ ಮರೆತಿದ್ದೇವೆ. ಬಸವಣ್ಣನನ್ನು ಹಿಡಿದುಕೊಂಡರೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಯಾವಾಗ ಬಸವ ಜಯಂತಿ ನಾಡಿನ ಪ್ರತಿಯೊಂದು ಹರಿಜನಕೇರಿಯಲ್ಲಿ ಆಗುತ್ತದೊ ಆಗ ರಾಜ್ಯ ಉದ್ದಾರವಾಗುತ್ತದೆ. ಈ ಜಗತ್ತಿನ ಮೂಲಭೂತ ಬದಲಾವಣೆ ಮಾಡಿರುವುದು ಸರ್ಕಾರಗಳು, ದೊಡ್ಡ ಶಕ್ತಿಗಳಲ್ಲಾ, ವ್ಯಕ್ರಿಗಳು, ಐನ್ ಸ್ಟಿನ್, ಬುದ್ದ, ಮಹಮದ್ ಪೈಗಂಬರ್, ಬಸವಣ್ಣ. ಎಲ್ಲರೂ ದೊಡ್ಡ ವ್ಯಕ್ತಿಗಳು. ಬದುಕಿನಲ್ಲಿ ಕೇವಲ ತ್ಯಾಗ‌ಮಾಡಿದರೆ ಸಾಲದು ನಿಮ್ಮ ಮನದಾಳದ ಮಾತು ಹಂಚಿಕೊಂಡಾಗ ಮಾತ್ರ ಸಾಕ್ಷಾತ್ಕಾರ ಬರುತ್ತದೆ. ಸ್ವಾಮಿ ವಿವೇಕಾನಂದರು ತಮಗೆ ಜ್ಞಾನೋದಯ ಆಗಿದೆ ಎಂದು ಹೇಳಿದಾಗ ಅವರಿಗೆ ರಾಮಕೃಷ್ಣ ಪರಮಹಂಸರು ನಿನ್ನ ಜ್ಞಾನ ಜಗತ್ತಿಗೆ ತಿಳಿದಾಗ ನಿನಗೆ‌ ಜ್ಞಾನೋದಯ ಆಗುತ್ತದೆ ಎಂದು ಹೇಳಿದ್ದರು. ಅವರ ಮಾತಿನಂತೆ ವಿವೇಕಾನಂದರು ನಡೆದುಕೊಂಡು ಜ್ಞಾನ ಹಂಚಿದರು ಎಂದು ಹೇಳಿದರು.

ನಾಡೋಜ ಗೋ.ರು.ಚನ್ನಬಸಪ್ಪ ಅವರ ಸಾಹಿತ್ಯ ದೊಡ್ಡ ಆಸ್ತಿ, ಅವರ ಜ್ಞಾನ, ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದರು.
ಉಜ್ವಲ ಭವಿಷ್ಯ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಉಜ್ವಲ ಭವಿಷ್ಯ ಇದೆ. ಅವರ ಭವಿಷ್ಯದೊಂದಿಗೆ ರಾಜ್ಯದ ಉಜ್ವಲ ಭವಿಷ್ಯ ಸೇರಬೇಕು. ನೀವು ಫ.ಗು.ಹಳಕಟ್ಟಿ ಅವರ ಸೇವೆ ಮಾಡುತ್ತಿದ್ದೀರಾ. ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ, ಆದರೆ, ಒಬ್ಬ ಮುತ್ಸದ್ದಿ ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾನೆ. ನೀವು ಮುತ್ಸದ್ದಿಗಳಾಗಿ ಮುಂದಿನ ಜನಾಂಗಕ್ಕೆ ಅನುಕೂಲ ಮಾಡುತ್ತಿದ್ದೀರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ  ವಿ. ಸೋಮಣ್ಣ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ, ಉಪಾಧ್ಯಕ್ಷ ಷಡಕ್ಷರಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ, ಎಂ.ಡಿ. ಪಲ್ಲವಿ ಹಾಗೂ ಬಿಎಲ್ ಡಿಇ ಸಂಸ್ಥೆಯ ವಚನ ಪಿತಾಮಹ ಫ.ಗು ಹಳಕಟ್ಟಿ ಸಂಶೋಧನಾ ಸಂಸ್ಥೆಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/02/Kumadvati-College-Shikaripura-2025-Video.mp4
https://kalpa.news/wp-content/uploads/2024/04/VID-20240426-WA0008.mp4

               

Tags: BangaloreBasavannaBasavanna BommaiKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_Kannadaಬಸವಣ್ಣಬಸವರಾಜ ಬೊಮ್ಮಾಯಿಬೆಂಗಳೂರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೃಷ್ಣಾ ನ್ಯಾಯಾಧೀಕರಣ | ಗೆಜೆಟ್ ಅಧಿಸೂಚನೆ ಹೊರಡಿಸಲು ಸಿಎಂ ಸಿದ್ದರಾಮಯ್ಯ ಒತ್ತಾಯ

Next Post

ಹೊಸನಗರ | ಕುಟುಂಬ ಕಲಹ | ಓರ್ವನ ಹತ್ಯೆ

kalpa News

kalpa News

Next Post
ಹೊಸನಗರ | ಕುಟುಂಬ ಕಲಹ | ಓರ್ವನ ಹತ್ಯೆ

ಹೊಸನಗರ | ಕುಟುಂಬ ಕಲಹ | ಓರ್ವನ ಹತ್ಯೆ

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL