ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗಾಂಧೀಜಿಯವರು ಸರ್ವರ ಹಿತಕ್ಕಾಗಿ ಆದರ್ಶಗಳನ್ನು ನಮ್ಮ ಮುಂದೆ ಇಟ್ಟಿದ್ದು, ಈ ಆದರ್ಶಗಳು ಆದರ್ಶಗಳಾಗಿಯೇ ಉಳಿಯಬೇಕೆ? ಇಂದು ನಾವು ಈ ಕುರಿತು ಚಿಂತಿಸಬೇಕು, ಗಾಂಧೀಜಿ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಕುರಿತು ಹೇಳಿದ ನುಡಿಗಳು ಎಲ್ಲರೂ ಎಲ್ಲ ಕಾಲದಲ್ಲಿಯೂ ಮನನ ಮಾಡುವುದಲ್ಲದೆ ಅವುಗಳನ್ನು ಕರ‍್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ಸಿ.ವಿ. ತಿರುಮಲ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಮೃತನಗರ ಮುಖ್ಯರಸ್ತೆಯ ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್ನಲ್ಲಿ ಕರ್ನಾಟಕ ಸರ್ವೋದಯ ಮಂಡಲದಿಂದ ಆಯೋಜಿಸಿದ್ದ ಗಾಂಧೀಜಿ ಮತ್ತು ಶಿಕ್ಷಣ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡಿ, ಸ್ವಾತಂತ್ರ ಅಮೃತ ಮಹೋತ್ಸವ ಈ ಕಾಲಘಟ್ಟದಲ್ಲಿ ಗಾಂಧಿ ಚಿಂತನೆಗಳನ್ನು ಯುವ ಜನತೆಗೆ ಪ್ರಚಾರಪಡಿಸುವ ಉದ್ದೇಶದಿಂದ ನಗರದಾದ್ಯಂತ ಈ ಉಪನ್ಯಾಸ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Also read: ನಕಾಶೆ ಪ್ರಕಾರ ರಸ್ತೆ ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮವಹಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ಸಮಾರಂಭವನ್ನು ಸಿಲಿಕಾನ್ ಸಿಟಿ ಎಜುಕೇಷನಲ್ ಅಕಾಡೆಮಿಯ ಕಾರ್ಯದರ್ಶಿ ಎಲ್. ರವಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಪ್ರಾಂಶುಪಾಲೆ ಕೀರ್ತಿ ಬದಿಯಡ್ಕ, ಕರ್ನಾಟಕ ಸರ್ವೋದಯ ಮಂಡಲ ಖಜಾಂಚಿ ವಿರೂಪಾಕ್ಷ ಟಿ ಹುಡೇದ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post