ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್ ಮೂರನೆಯ ಅಲೆ ಆತಂಕದ ನಡುವೆಯೇ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎರಡು ಹಂತಗಳಲ್ಲಿ ಶಾಲೆಗಳು ಬಾಗಿಲು ತೆರೆಯಲಿವೆ.
ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 23ರಿಂದ 9 ರಿಂದ 12ನೆಯ ತರಗತಿಗಳು ಆರಂಭವಾಗಲಿದ್ದು, ದಿನಬಿಟ್ಟು ದಿನ ಬ್ಯಾಚ್ ಆಧಾರದಲ್ಲಿ ತರಗತಿಗಳು ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಆಗಸ್ಟ್ ಕೊನೆಯ ವಾರದಲ್ಲಿ ಪ್ರೈಮರಿಯಿಂದ 8ನೆಯ ತರಗತಿ ವರೆಗಿನ ಶಾಲೆಗಳು ಆರಂಭವಾಗಲಿದ್ದು, ಕೋವಿಡ್ ಹೊರಡುವಿಕೆ ಪರಿಸ್ಥಿತಿಯನ್ನು ಗಮನಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ತಜ್ಞರ ವರದಿ ಆಧರಿಸಿ ಶಾಲೆ ಆರಂಭದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post