ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಳ್ಳಿಗಳು ಹಾಗೂ ಹಳ್ಳಿಗರು ಬೆಂಗಳೂರನ್ನು ಸೇರುತ್ತಾ ಸಾಗಿದಂತೆ ಬೆಂಗಳೂರು ದೊಡ್ಡದಾಗುತ್ತಾ ಹೋಗಿದೆ. ನಾವು ಹಳ್ಳಿಗಳನ್ನು ಮಾತ್ರ ಬಿಟ್ಟುಬಂದಿಲ್ಲ, ಈ ಮಾಯಾ ನಗರಿಗೆ ಬರುವಾಗ ನಮ್ಮ ಸಂಸ್ಕೃತಿಯನ್ನೂ ಬಿಟ್ಟು ಬಂದಿರುವುದು ದುರಂತ. ಇಂದು ಹಳ್ಳಿಗಳಲ್ಲಿಯೂ ಕೂಡ ನಗರದ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಶ್ರೀರಾಮಚಂದ್ರಾಪುರಮಠದ
ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು #Raghaveshwara Shri ಹೇಳಿದರು.
ಬೆಂಗಳೂರಿನ ಗಿರಿನಗದಲ್ಲಿರುವ ಶ್ರೀರಾಮಚಂದ್ರಾಪುರಮಠದ #Ramachandrapura Mutt ಶಾಖೆಯಲ್ಲಿ ನಡೆದ ‘ಗೋದೀಪ – ದೀಪಾವಳಿ ಗೋಪೂಜೆ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಭಗವಾನ್ ಶ್ರೀಕೃಷ್ಣನು ಗೋಪೂಜೆಯ ಪ್ರವರ್ತಕನಾಗಿದ್ದು, ಗೋವು ಜನರ ಜೀವನದ ಆಧಾರವಾದ್ದರಿಂದ ಗೋವಿಗೆ ಪೂಜೆ ಸಲ್ಲಬೇಕು ಎಂದು ಭಾಗವತದಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ನಮ್ಮ ಜೀವನದಲ್ಲಿ ಗೋವನ್ನು ತಂದರೆ ಅದೇ ನಿಜವಾದ ಗೋಪೂಜೆಯಾಗಿದ್ದು, ಗೋವನ್ನು ನಮ್ಮ ಜೀವನದ ಜೋಡಿಸಿಕೊಳ್ಳಬೇಕು. ಆದರೆ ಗೋವಿನ ಮರಣವನ್ನು ನಮ್ಮ ಜೀವನದಲ್ಲಿ ಜೋಡಿಸಿಕೊಂಡಿರುವುದು ದುರಂತವಾಗಿದೆ ಎಂದರು.

ಸಂಸದ ತೇಜಸ್ವಿ ಸೂರ್ಯ #MP Tejaswi Surya ಮಾತನಾಡಿ, ಮದುವೆಯಾದ ನಂತರ ಮೊದಲ ದೀಪಾವಳಿಯನ್ನು ಗೋಪೂಜೆಯೊಂದಿಗೆ ಶ್ರೀರಾಮಚಂದ್ರಾಪುರ ಮಠದಲ್ಲಿ ಆಚರಿಸುತ್ತಿರುವುದು ನಮ್ಮ ಪಾಲಿನ ಭಾಗ್ಯವಾಗಿದೆ. ದೇಶದಲ್ಲಿ ಗೋಸಂರಕ್ಷಣೆಗೆ ಶ್ರೀಗಳ ಕೊಡುಗೆ ಅಪಾರವಾಗಿದ್ದು, ಬೆಂಗಳೂರು ನಗರದಲ್ಲಿ ದೇಶಿ ಗೋತಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಅವಕಾಶ ಲಭಿಸಿದ್ದು ಧನ್ಯತೆಯ ಕ್ಷಣವಾಗಿದೆ. ನಾನು ವೇದ ಮಂತ್ರಗಳನ್ನು ಕಲಿತಿದ್ದು ಶ್ರೀರಾಮಚಂದ್ರಾಪುರ ಮಠದಲ್ಲಿ. ನಮ್ಮ ಕುಟುಂಬದಲ್ಲಿ ಯಾವುದೇ ಶುಭಕಾರ್ಯವಾದರೂ ಇಲ್ಲಿ ಪೂಜೆ ಸಲ್ಲಿಸಿಯೇ ಆರಂಭಿಸುತ್ತೇವೆ. ಮಂದಹಾಸದ ಶ್ರೀಗಳ ಕೃಪಾದೃಷ್ಟಿಯೇ ನಮ್ಮೆಲ್ಲರ ನೋವುಗಳನ್ನು ಪರಿಹರಿಸುತ್ತದೆ ಎಂದರು.

ಶಿವಶ್ರೀ ಸ್ಕಂದಪ್ರಸಾದ ಮತ್ತು ತಂಡದವರಿಂದ ನಡೆದ ‘ಗೋ ಗಾನಾಮೃತ’ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. ಹವ್ಯಕ ಮಹಾಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಪ್ರಮೋದ್ ಮೋಹನ್ ಹೆಗಡೆ ಶ್ರೀರಾಮಚಂದ್ರಾಪುರಮಠದಿಂದ ನಡೆದ ಗೋಸಂರಕ್ಷಣಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು. ರಂಜನಿ ಕೀರ್ತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬೆಳಗ್ಗೆಯಿಂದ ನಡೆದ ಸಾರ್ವಜನಿಕ ಗೋಪೂಜೆಯಲ್ಲಿ ನೂರಾರು ಗೋಪ್ರೇಮಿಗಳ ಭಾಗಿಗಳಾಗಿ ಪೂಜೆ ಹಾಗೂ ಗೋಗ್ರಾಸವನ್ನು ಸಮರ್ಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post