ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೋಹಿತ್ ಚಕ್ರತೀರ್ಥ Rohith Chakratheertha ನೇತೃತ್ವದ ಸಮಿತಿ ಮೂಲಕ ಶಾಲಾ ಪಠ್ಯಪುಸ್ತಕವನ್ನು ಕೇಸರೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಿಎಫ್’ಐ ಕಿಡಿ ಕಾರಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಿಎಫ್’ಐ ರಾಜ್ಯಾಧ್ಯಕ್ಷ ಅತಾವುಲ್ಲಾ, ದೇಶದ್ರೋಹಿ ಸಂಘಟನೆಯಾಗಿರುವ ಆರ್’ಎಸ್’ಎಸ್ ಸಂಸ್ಥಾಪಕ ಹೆಡಗೇವಾರ್ ಎಂದಿಗೂ ಆದರ್ಶಪುರುಷ ಆಗಲು ಸಾಧ್ಯವೇ ಇಲ್ಲ. ಅಲ್ಲದೇ, ಚಕ್ರವರ್ತಿ ಸೂಲಿಬೆಲೆಯ ಪಾಠ ಏತಕ್ಕಾಗಿ ಪಠ್ಯದಲ್ಲಿ ಬೇಕು ಎಂದು ಪ್ರಶ್ನಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಅವರ ನೇತೃತ್ವ ಸಮಿತಿ ಮೂಲಕ ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ಕೇಸರೀಕರಣ ಮಾಡಲು ಹೊರಟಿದೆ. ಇದನ್ನು ತತಕ್ಷಣವೇ ಕೈಬಿಡಬೇಕು. ಇಲ್ಲದೇ ಇದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Also read: ಕೊರೋನಾ ನಿಯಮ ಉಲ್ಲಂಘನೆ: ಸಿದ್ಧರಾಮಯ್ಯ, ಡಿಕೆಶಿಗೆ ಖುದ್ಧು ಹಾಜರಾಗಲು ಕೋರ್ಟ್ ಸಮನ್ಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post