ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಂಬರುವ ಹೋಳಿ ಹಬ್ಬದ #Holi Festival ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸಲು, ರೈಲ್ವೆ ಮಂಡಳಿಯು ಈ ಕೆಳಗಿನ ವಿಶೇಷ ರೈಲುಗಳ ಸೇವೆಗಳನ್ನು ವಿಸ್ತರಿಸಲು ನಿರ್ಧರಿಸಿದೆ.
ಈ ಕುರಿತಂತೆ ರೈಲ್ವೆ ಮಂಡಳಿ ಮಾಹಿತಿ ನೀಡಿದ್ದು, ವಿವರಗಳು ಹೀಗಿವೆ:
- ಭಾನುವಾರದಂದು ಸಂಚರಿಸುವ 07313 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ-ಕೊಲ್ಲಂ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲು ಸೇವೆಯನ್ನು 01.03.2026 ರಿಂದ 29.03.2026 ರವರೆಗೆ ವಿಸ್ತರಿಸಲಾಗಿದೆ. ಅದಕ್ಕೆ ಅನುಗುಣವಾಗಿ, ಸೋಮವಾರದಂದು ಸಂಚರಿಸುವ ರೈಲು ಸಂಖ್ಯೆ 07314 ಕೊಲ್ಲಂ-ಎಸ್’ಎಸ್’ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲು ಸೇವೆಯನ್ನು 02.03.2026 ರಿಂದ 30.03.2026 ರವರೆಗೆ ವಿಸ್ತರಿಸಲಾಗಿದೆ.

- ಸೋಮವಾರದಂದು ಚಲಿಸುವ ರೈಲು ಸಂಖ್ಯೆ 06523 ಬೆಂಗಳೂರು – ತಿರುವನಂತಪುರಂ ಉತ್ತರ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲನ್ನು 02.03.2026 ರಿಂದ 30.03.2026 ರವರೆಗೆ ವಿಸ್ತರಿಸಲಾಗಿದೆ. ಆದರೆ ಮಂಗಳವಾರದಂದು ಚಲಿಸುವ ರೈಲು ಸಂಖ್ಯೆ 06524 ತಿರುವನಂತಪುರಂ ಉತ್ತರ – ಬೆಂಗಳೂರು ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲನ್ನು 03.03.2026 ರಿಂದ 31.03.2026 ರವರೆಗೆ ವಿಸ್ತರಿಸಲಾಗಿದೆ.
- ಶುಕ್ರವಾರದಂದು ಚಲಿಸುವ ರೈಲು ಸಂಖ್ಯೆ 06555 ಬೆಂಗಳೂರು – ತಿರುವನಂತಪುರಂ ಉತ್ತರ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲನ್ನು 27.02.2026 ರಿಂದ 27.03.2026 ರವರೆಗೆ ವಿಸ್ತರಿಸಲಾಗಿದೆ ಮತ್ತು ಭಾನುವಾರದಂದು ಚಲಿಸುವ ರೈಲು ಸಂಖ್ಯೆ 06556 ತಿರುವನಂತಪುರಂ ಉತ್ತರ – ಬೆಂಗಳೂರು ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲನ್ನು 01.03.2026 ರಿಂದ 29.03.2026 ರವರೆಗೆ ವಿಸ್ತರಿಸಲಾಗಿದೆ.

- ಶುಕ್ರವಾರದಂದು ಚಲಿಸುವ ರೈಲು ಸಂಖ್ಯೆ 07153 ನರಸಾಪುರ- ಬೆಂಗಳೂರು ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲುವನ್ನು 06.03.2026 ರಿಂದ 27.03.2026 ರವರೆಗೆ ಮತ್ತು ಶನಿವಾರದಂದು ಚಲಿಸುವ ರೈಲು ಸಂಖ್ಯೆ 07154 ಬೆಂಗಳೂರು-ನರಸಾಪುರ ಸಾಪ್ತಾಹಿಕ ವಿಶೇಷ ರೈಲು ಅನ್ನು 07.03.2026 ರಿಂದ 28.03.2026 ರವರೆಗೆ ವಿಸ್ತರಿಸಲಾಗಿದೆ.
ವಿಸ್ತ್ರತ ಅವಧಿಯಲ್ಲಿ, ಈ ರೈಲುಗಳು (07313/14, 06523/24, 06555/56 07153/54) ಪ್ರತಿ ದಿಕ್ಕಿನಲ್ಲಿ ನಾಲ್ಕು ಟ್ರಿಪ್’ಗಳನ್ನು ನಡೆಸುತ್ತವೆ. - ಬುಧವಾರದಂದು ಚಲಿಸುವ ರೈಲು ಸಂಖ್ಯೆ 06547 ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲು ಅನ್ನು 04.03.2026 ರಿಂದ 25.03.2026 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ಗುರುವಾರಗಳಂದು ಚಲಿಸುವ ರೈಲು ಸಂಖ್ಯೆ 06548 ತಿರುವನಂತಪುರಂ ಉತ್ತರ – ಬೆಂಗಳೂರು ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲು ಸೇವೆಯನ್ನು 05.03.2026 ರಿಂದ 26.03.2026 ರವರೆಗೆ ವಿಸ್ತರಿಸಲಾಗಿದೆ. ಈ ಸೇವೆಗಳು ವಿಸ್ತ್ರತ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ನಾಲ್ಕು ಟ್ರಿಪ್’ಗಳನ್ನು ನಿರ್ವಹಿಸುತ್ತವೆ.

- ಸೋಮವಾರ ಮತ್ತು ಶುಕ್ರವಾರಗಳಂದು ಚಲಿಸುವ ರೈಲು ಸಂಖ್ಯೆ 07033 ಕಾಕಿನಾಡ ಪಟ್ಟಣ – ಮೈಸೂರು ದ್ವೈವಾರ ವಿಸ್ತ್ರತ ವಿಶೇಷ ರೈಲು ಸೇವೆಯನ್ನು 02.03.2026 ರಿಂದ 30.03.2026 ರವರೆಗೆ ವಿಸ್ತರಿಸಲಾಗಿದೆ. ಅದಕ್ಕೆ ಅನುಗುಣವಾಗಿ, ಮಂಗಳವಾರ ಮತ್ತು ಶನಿವಾರಗಳಂದು ಚಲಿಸುವ ರೈಲು ಸಂಖ್ಯೆ 07034 ಮೈಸೂರು – ಕಾಕಿನಾಡ ಪಟ್ಟಣ ದ್ವೈವಾರ ಎಕ್ಸ್’ಪ್ರೆಸ್ ವಿಶೇಷ ರೈಲು ಸೇವೆಯನ್ನು 03.03.2026 ರಿಂದ 31.03.2026 ರವರೆಗೆ ವಿಸ್ತರಿಸಲಾಗಿದೆ. ಈ ಸೇವೆಗಳು ವಿಸ್ತ್ರತ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ಒಂಬತ್ತು ಟ್ರಿಪ್’ಗಳನ್ನು ನಿರ್ವಹಿಸುತ್ತವೆ.
ಮೇಲಿನ ಎಲ್ಲಾ ವಿಶೇಷ ರೈಲುಗಳು ಅಸ್ತಿತ್ವದಲ್ಲಿರುವ ಸೇವಾ ದಿನಗಳು, ಸಮಯ ಮತ್ತು ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರು ವಿಸ್ತ್ರತ ಸೇವೆಗಳನ್ನು ಗಮನಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















