ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು #Tobacco ಪದಾರ್ಥಗಳ ಬಳಕೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ, ತಂಬಾಕು ತಿಂದು ಸಿಕ್ಕ ಸಿಕ್ಕಲ್ಲಿ ಉಗಿಯುವವರ ವಿರುದ್ಧ ಸಮಯ ಸಾರಿದೆ.
ಈ ಕುರಿತಂತೆ ಸಾರ್ವಜನಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ #Minister Dinesh Gundurao ಅವರು ತಂದ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಯವರಿಂದ ಅನುಮೋದನೆ ದೊರೆತಿದ್ದು, ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ಹೊರತಾಗಿ ಹೊಗೆ ರಹಿತ ತಂಬಾಕು ಪದಾರ್ಥಗಳನ್ನ ಸೇವಿಸಿ ಉಗಿಯುವಂತಿಲ್ಲ.
ವಿಶ್ವ ತಂಬಾಕು ರಹಿತ ದಿನದಂದು #World No Tobacco Day `ಸಾರ್ವಜನಿಕ ಆರೋಗ್ಯ’ ರಕ್ಷಣೆಯತ್ತ ರಾಜ್ಯ ಸರ್ಕಾರದಿಂದ ಮಹತ್ವದ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆಯನ್ನು ನಿಷೇಧಿಸಲಾಗಿದೆ. ಕೊಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ಹೊಗೆ ರಹಿತ ತಂಬಾಕು ಪದಾರ್ಥಗಳಿಗೆ ಕಡಿವಾಣ ಹಾಕುವುದರೊಂದಿಗೆ ಹುಕ್ಕಾ ಬ್ಯಾನ್ ಮಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ರಮಕ್ಕೆ ಇದೀಗ ರಾಷ್ಟçಪತಿಗಳಿಂದ ಕೂಡ ಮನ್ನಣೆ ದೊರೆತಿದ್ದು, ಇಂದು ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.
ರಾಜ್ಯದಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೇ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ ಉಗಿಯುವಂತಿಲ್ಲ.
ಸಿಗರೇಟ್ #Cigarette ಹೊರತಾಗಿಯೂ ಹೊಗೆ ರಹಿತ ತಂಬಾಕು ಪದಾರ್ಥಗಳು ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿದ್ದವು. ತಂಬಾಕು ಪದಾರ್ಥಗಳನ್ನ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ಬೇಕಂದರಲ್ಲಿ ಉಗಿಯುವುದರಿಂದ ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ವೈರಸ್ ಹರಡಬಹುದು. ವಿಶೇಷವಾಗಿ ಕೋವಿಡ್ 19 ವೈರಸ್’ನಿಂದ ಸಾರ್ವಜನಿಕರು ತಮ್ಮನ್ನ ತಾವು ರಕ್ಷಿಸಿಕೊಕೊಳ್ಳುವುದು ಸವಾಲಾಗಿತ್ತು. ಅಲ್ಲದೇ ಟಿಬಿ ಹೊಂದಿರುವ ರೋಗಿಗಳಿಗೂ ತೊಂದರೆ ಉಂಟಾಗಿತ್ತು.
ಈ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಹಿಂದೆ ಇದ್ದ ಕೊಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ಎರಡು ಸದನದಲ್ಲಿ ಅನುಮೋದನೆ ಪಡೆದಿದ್ದರು. ಇದು ಕೇಂದ್ರದ ಕಾಯ್ದೆಯಾಗಿದ್ದರಿಂದ ರಾಷ್ಟ್ರಪತಿಯವರ ಅನುಮೋದನೆಗೆ ಕಳಿಸಲಾಗಿತ್ತು. ರಾಜ್ಯ ಸರ್ಕಾರದ ಈ ಮಹತ್ವದ ಹೆಜ್ಜೆಗೆ ರಾಷ್ಟçಪತಿಗಳಿಂದ ಅನುಮೋದನೆ ದೊರೆತಿದ್ದು, ರಾಜ್ಯ ಸರ್ಕಾರಿಂದ ಇಂದು ಅಧಿಸೂಚನೆ ಹೊರಡಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಗೆ 200 ರೂ. ಇದ್ದ ದಂಡವನ್ನು 1000 ರೂಪಾಯಿವರೆಗೆ ಹೆಚ್ಚಿಸಲಾಗಿದೆ. 21 ವರ್ಷದ ಒಳಗಿನವರು ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ. ಉಪಹಾರ ಗೃಹ, ಪಬ್, ಬಾರ್, ರೆಸ್ಟೋರೆಂಟ್’ಗಳಲ್ಲಿ ಹುಕ್ಕಾ ಬ್ಯಾನ್ ಮಾಡಲಾಗಿದ್ದು, ಹುಕ್ಕಾ ಬಾರ್ ವಿರುದ್ಧ ಕನಿಷ್ಠ 50 ಸಾವಿರದಿಂದ 1 ಲಕ್ಷ ದಂಡ, ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post