ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪತಿಯಿಂದ ದೈಹಿಕ ಸಂಪರ್ಕ ನಿರಾಕರಿಸುವುದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಕುರಿತಂತೆ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವ ನ್ಯಾಯಾಲಯ, ಪತಿಯಿಂದ ದೈಹಿಕ ಸಂಪರ್ಕ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ಕ್ರೌರ್ಯವಾಗುತ್ತದೆ. ಆದರೆ, ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯವಾಗುವುದಿಲ್ಲ ಎಂದು, ಈ ಕುರಿತಂತೆ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸಿದೆ.
ಏನಿದು ಪ್ರಕರಣ?
2019ರಲ್ಲಿ ಯುವತಿಯೊಬ್ಬರು ವ್ಯಕ್ತಿಯೊಬ್ಬನನ್ನು ವಿವಾಹವಾಗಿದ್ದರು. ವಿವಾಹವಾಗಿ 28 ದಿನ ಜೊತೆಯಲ್ಲಿದ್ದರು. ಇದಾದ ನಂತರ ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಮುಖ ಮಾಡಿದ್ದಾರೆ. ಅಲ್ಲದೇ ದೈಹಿಕ ಪ್ರೀತಿಗಿಂತ, ಆತ್ಮಗಳ ಪ್ರೀತಿ ಮುಖ್ಯವೆನ್ನುತ್ತಿದ್ದ ಪತಿ, ಅಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸುವಂತೆ ತನ್ನ ಪತ್ನಿಗೆ ಹೇಳುತ್ತಿದ್ದರು. ಪತಿಯ ನಡೆಯಿಂದ ಮನನೊಂದ ಪತ್ನಿ ದೈಹಿಕ ಸಂಬಂಧದಿಂದ ನಿರಾಸೆ ಹೊಂದಿ ಪತಿ ವಿರುದ್ಧ ದೂರು ದಾಖಲಿಸಿದ್ದರು.
Also read: 91ರ ವಯಸ್ಸಿನಲ್ಲೂ ನಾನು ಆರೋಗ್ಯದಿಂದಿರಲು ಯೋಗ ಕಾರಣ: ಮಾಜಿ ಪಿಎಂ ದೇವೇಗೌಡ
ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 498ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ-1961ರ ಸೆಕ್ಷನ್ 4ರ ಅಡಿಯಲ್ಲಿ ಪತಿ ಹಾಗೂ ಪೋಷಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಆರೋಪಪಟ್ಟಿಯನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಪತ್ನಿ ಸಲ್ಲಿಸಿದ ದೂರನ್ನೇ ವಜಾಗೊಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post