ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನನಗೆ ಮತ್ತೆ ಸಚಿವನಾಗಬೇಕು ಎಂಬ ಹಂಬಲವಿಲ್ಲ. ಆದರೆ, ಕ್ಲೀನ್ ಚಿಟ್ ದೊರೆತರೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ CM Basavaraja Bommai ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ Nalin Kumar Kateel ಹೇಳಿದ್ದ ಕಾರಣ ಕೇಳುತ್ತಿದ್ದೇನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಅತ್ಯಂತ ಸೌಮ್ಯ ರೀತಿಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ನಗರದ ಖಾಸಗಿ ಹೊಟೇಲ್’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮತ್ತೆ ಸಚಿವ ಸ್ಥಾನ ವಾಪಸ್ ನೀಡುವುದಾಗಿ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಭರವಸೆ ನೀಡಿತ್ತು. ಆದರೆ, ಭರವಸೆ ಈಡೇರಿಸದ ಕಾರಣ ಬೇಸರವಿದೆ ಎಂದು ಪಕ್ಷದ ಹಿರಿಯರ ಮೇಲೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು.
90ರ ದಶಕದಲ್ಲಿ ಬಿಜೆಪಿ ರಾಜ್ಯದಲ್ಲಿ ಬಹಳ ವೇಗ ಪಡೆಯಿತು. ಅನಂತ್ ಕುಮಾರ್, ಯಡಿಯೂರಪ್ಪ Yadiyurappa ಜೊತೆ ಹೆಗಲಿಗೆ ಹೆಗಲು ಕೊಟ್ಟಿದ್ದೇನೆ. ಅಲ್ಲದೇ, ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಷಿ, ಸದಾನಂದ ಗೌಡರಿಗೂ ಸಾಥ್ ನೀಡಿದ್ದೇನೆ. ತುಂಬಾ ಪ್ರವಾಸ ಮಾಡಿದ್ದೇನೆನೆ. ರಾಜ್ಯದಲ್ಲಿ ಇವತ್ತು ಬಿಜೆಪಿ ಬರುವುದಕ್ಕೆ, ಲೋಕಸಭೆಯಲ್ಲಿ 25 ಸೀಟ್ ಗೆಲ್ಲುವುದಕ್ಕೆ ರಾಜ್ಯದ ಜನರ ಕೊಡುಗೆಯಿದೆ ಎಂದರು.
Also read: ಪ್ರೇಕ್ಷಕರ ಹರ್ಷೋದ್ಗಾರದ ನಡುವೆ ವಿಜೃಂಭಣೆಯ ಹೋರಿ ಬೆದರಿಸುವ ಹಬ್ಬ ಸಂಪನ್ನ
ನನ್ನ ಮೇಲೆ ನಿರಾಧಾರವಾದ ಆರೋಪ ಬಂದಿತ್ತು. ಆಗ ಕೇಂದ್ರದ ನಾಯಕರಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ವಿಚಾರ ತಿಳಿಸಿದೆ. ಆಗ ಎಲ್ಲರೂ ಬೇಡ ಅಂದಿದ್ದರು. ಹಿಂದೆ ನಾನು ಪರಿಷತ್ ಪ್ರತಿಪಕ್ಷದ ನಾಯಕನಾಗಿದ್ದಾಗ ಕೆಜೆ ಜಾರ್ಜ್ ಮೇಲೆ ಆರೋಪ ಬಂದಿತ್ತು. ಆಗ ಅವರಿಗೂ ರಾಜೀನಾಮೆ ನೀಡಲು ಮನವಿ ಮಾಡಿದ್ದೆ. ಅವರು ಅದನ್ನು ಗೌರವಿಸಿ ವಾಪಸ್ ಬಂದರು. ಅದೇ ರೀತಿ ನಾನೂ ಕೂಡ ರಾಜೀನಾಮೆ ಕೊಟ್ಟೆ. ನನ್ನ ಕೇಸ್ ತನಿಖೆ ಆಯ್ತು, ಈ ಕೇಸ್ ನಿರಾಧಾರ ಅಂತ ತೀರ್ಪು ಬಂತು, ಕ್ಲೀನ್ ಚಿಟ್ ದೊರೆತು 4 ತಿಂಗಳಾಗಿದೆ. ನಾನು ಯಾವುದೇ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿಲ್ಲ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಬೆಳಗಾವಿಗೆ ಹೋಗಿ ಸೌಮ್ಯ ಸ್ವಭಾವದ ಪ್ರತಿಭಟನೆ ಮಾಡೋದಾಗಿ ತಿಳಿಸಿದ್ದೇನೆ. ಸ್ಪೀಕರ್ ಅವರಿಗೂ ಪತ್ರ ನೀಡಿದ್ದೇನೆ ಎಂದರು.
ರಾಷ್ಟ್ರೀಯ ವಾಹಿನಿಗೆ ಸಿಎಂ ಇಂಟರ್’ವ್ಯೂ ನೀಡಿದ್ದು, ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಕ್ಲೀನ್ ಚಿಟ್ ಇರುವುದರಿಂದ ಅವರಿಗೆ ಸ್ಥಾನ ನೀಡಲಾಗುತ್ತೆ ಎಂದಿದ್ದಾರೆ. ಸಿಎಂರವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದಷ್ಟು ಬೇಗ ನಮ್ಮನ್ನು ಕ್ಯಾಬಿನೆಟ್’ಗೆ ಸೇರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ಸಿಗರು ಸ್ವರ್ಗದಲ್ಲಿದ್ದಾರೆ. ಅವರ ಅಪೇಕ್ಷೆ ಇದ್ದಿದ್ದು ರಾಷ್ಟ್ರವನ್ನು ಉಳಿಸುವುದಾಗಿತ್ತು. ಅವರಿಗೆ ಈಗಿನ ಕಾಂಗ್ರೆಸ್ ಅಪಮಾನ ಮಾಡಬಾರದು. ಯಾರಿಗೂ ಮುಜುಗರ ಆಗದಂತೆ ಎಚ್ಚರ ವಹಿಸಿದ್ದೇನೆ. ರಾಜ್ಯದ ಪಕ್ಷಕ್ಕೂ ನನ್ನ ನಡೆ ಮುಜುಗರ ಆಗದಂತೆ ಎಚ್ಚರ ವಹಿಸಿದ್ದೇನೆ. ಇಡೀ ರಾಜ್ಯದಿಂದ ನಂಗೆ ಫೋನ್ ಬರುತ್ತಿದೆ. ನೀವು ಪಕ್ಷವನ್ನು ಕಟ್ಟುವುದಕ್ಕೆ ತುಂಬಾ ಕೆಲಸ ಮಾಡಿದ್ದೀರಾ. ನಿಮಗೆ ಯಾಕೆ ಹೀಗೆ ಎಂದು ಕೇಳಿದ್ದಾರೆ ಎಂದಿದ್ದಾರೆ.
ನನ್ನನ್ನೂ ಸೇರಿ ಅನೇಕರು ಮಾಡಿದ ಪ್ರಯತ್ನವೇ ಇವತ್ತಿನ ಬಿಜೆಪಿಗೆ ಕಾರಣ. ನಾವೆಲ್ಲ 30-40 ವರ್ಷಗಳಿಂದ ಶಕ್ತಿ ಇಲ್ಲದಿದ್ದಾಗಲೂ ಹೋರಾಟ ಮಾಡಿದ್ದೇವೆ. ಶೇಷಾದ್ರಿಪುರಂ ಸಣ್ಣ ಕಚೇರಿಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಸಿಎಂ ನೇರವಾಗಿ ಹೇಳಿಲ್ಲ. ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯನ್ನು ನೋಡಿದ್ದೇನೆ. ಸದನದಲ್ಲಿ ಪಾಲ್ಗೊಳ್ಳುವ ವಿಚಾರ ರಾತ್ರಿ ನಿರ್ಧರಿಸುತ್ತೇನೆ. ಸಿಎಂ ಅವರನ್ನು ನಂಬುತ್ತೇನೆ. ಅವರ ಬಳಿ ಮಾತಾಡಿ ತೀರ್ಮಾನ ಮಾಡುತ್ತೇನೆ. ನನಗೆ ಸಚಿವ ಆಗಬೇಕು ಎಂದು ಆಸೆ ಅಲ್ಲ. ಆದರೆ, ಆಪಾದನೆ ಬಂದಿತ್ತು, ಅದರಿಂದ ಕ್ಲೀನ್ ಆಗಿ ಹೊರಬಂದಿದ್ದೇನೆ. ನನ್ನ ವಾಪಸ್ ಸಚಿವ ಮಾಡ್ತೀನಿ ಎಂದು ಬಿಎಸ್’ವೈ, ಸಿಎಂ ಹಾಗೂ ಕಟೀಲ್ ಹೇಳಿದ್ದರು. ಈಗ ಅದ್ದಕ್ಕಾಗಿ ಕೇಳುತ್ತಿದ್ದೇನೆ. ನಾನು ಸಚಿವನಾಗದೇ ಇರುವುದಕ್ಕೆ ಪಿತೂರಿ ಬಗ್ಗೆ ಪ್ರಸ್ತಾಪ ಮಾಡಲ್ಲ. ಪಕ್ಷವನ್ನು 2-3 ಭಾಗ ಮಾಡಲು ಇಷ್ಟ ಇಲ್ಲ ಎಂದಿದ್ದಾರೆ.
ಇನ್ನು, ರಾಜ್ಯದ ನಾಯಕರನ್ನು ಹೈಕಮಾಂಡ್ ನಿರ್ಲಕ್ಷ ಮಾಡಿಲ್ಲ. ಯಡಿಯೂರಪ್ಪ ಅವರಿಗೆ ಕೇಂದ್ರದಲ್ಲಿ ಜಾಗ ಕೊಟ್ಟಿದ್ದಾರೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















