No Result
View All Result
Ashwini Vaishnaw Flags Off Bengaluru–Mumbai Express; Announces Vande Bharat Sleeper Soon
English Articles

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

by ಕಲ್ಪ ನ್ಯೂಸ್
May 18, 2026
0

Kalpa Media House  |  Bengaluru | Union Railway Minister Ashwini Vaishnaw on Monday virtually flagged off the new Train No....

Read moreDetails
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
Annual Disaster Management Mock Drill Conducted at Harihar Railway Station

Annual Disaster Management Mock Drill Conducted at Harihar Railway Station

May 14, 2026
  • Advertise With Us
  • Grievances
  • About Us
  • Contact Us
Monday, May 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಸ್ಪರ್ಧೆಯನ್ನು ಎದುರಿಸಲು ಸಾಧ್ಯ: ರವಿ ಹೆಗಡೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 15, 2021
in ಬೆಂಗಳೂರು ನಗರ
0
ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಸ್ಪರ್ಧೆಯನ್ನು ಎದುರಿಸಲು ಸಾಧ್ಯ: ರವಿ ಹೆಗಡೆ
Share on FacebookShare on TwitterShare on WhatsApp
ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಬ್ರೇಕಿಂಗ್ ನ್ಯೂಸ್ ಕೊಡುವುದಷ್ಟೇ ಮಾಧ್ಯಮದ ಕೆಲಸವಲ್ಲ, ಸಮಾಜಕ್ಕೆ ಉತ್ತಮ ಸಂದೇಶ ಕೊಡುವುದರ ಜೊತೆಗೆ, ಸಹಾಯ ಮಾಡುವುದು ಕೂಡ ಮಾಧ್ಯಮದ ಕಾರ್ಯ ಎಂದು ರವಿ ಹೆಗಡೆ ಹೇಳಿದರು.

ಅಖಿಲ ಹವ್ಯಕ ಮಹಾಸಭೆಯಿಂದ ಆಯೋಜಿತವಾದ ‘ವಿಜಯೀ ಭವ’ ಗೆಲುವಿಗೆ ನೂರಾರು ಮೆಟ್ಟಿಲು ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದ ಅವರು, ಎತ್ತರದ ಸ್ಥಾನ ಎರುವುದು ಕೆಲವೊಮ್ಮೆ ಸುಲಭ. ಆದರೆ ಆ ಸ್ಥಾನದಲ್ಲಿ ನಾವು ಎಷ್ಟು ಸಮಯ ಇರುತ್ತೇವೆ. ಹೇಗೆ ನಿರ್ವಹಿಸುತ್ತೇವೆ ಎಂಬುದು ನಮ್ಮ ಸಾಧನೆಯನ್ನು ನಿರ್ಧರಿಸುತ್ತದೆ.  ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಸ್ಪರ್ಧೆಯನ್ನು ಎದುರಿಸಲು ಸಾಧ್ಯ. ನಾನು ಕೆಲಸ ಮಾಡುವ ಪತ್ರಿಕೆಗಳಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ ಅತ್ಯುತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದರು.

ಪರಿಶ್ರಮ , ಒಳ್ಳೆಯ ಜೊತೆಗಾರರು ಹಾಗೂ ಹಿತೈಷಿಗಳ ಆಶೀರ್ವಾದಗಳಿಂದ ಮಹತ್ತರವಾದ ಸಾಧನೆ ಮಾಡಲು ಸಾಧ್ಯ. ಒಳ್ಳೆಯ ಪತ್ರಕರ್ತನಾಗಬೇಕು ಎಂಬುದಷ್ಟೇ ನನ್ನ ಕನಸಾಗಿತ್ತು. ಆರಂಭದಲ್ಲಿ ಕುಮಟಾದಲ್ಲಿ ಪತ್ರಿಕಾ ವಿತರಣೆ, ಜಾಹೀರಾತು ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿದ್ದನ್ನು ನೆನಪಿಸಿಕೊಂಡ ಅವರು, ಅಂದು ನಾನು ಆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿದ್ದರಿಂದ, ಇಂದು ಪ್ರಧಾನ ಸಂಪಾದಕನ ಹುದ್ದೆಯನ್ನು ನಿರ್ವಹಿಸಲು ಸಹಾಯವಾಗುತ್ತಿದೆ. ಕೇವಲ ಬರೆಯುವುದು ಮಾತ್ರ ಮಾಧ್ಯಮವಲ್ಲ. ತಂತ್ರಜ್ಞಾನ, ಆರ್ಥಿಕ ನಿರ್ವಹಣೆಗಳ ಸಮರ್ಪಕ ಬಳಕೆಯಿಂದ ಮಾತ್ರ ಸಂಪಾದಕ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಾಧಕರನ್ನು ನಾಡಿಗೆ ಪರಿಚಯಿಸಿ, ಸಮಾಜಕ್ಕೆ ಸ್ಪೂರ್ತಿ ತುಂಬಬೇಕಾದ ಕಾರ್ಯ ಮಾಧ್ಯಮಗಳದ್ದು. ಮಾಧ್ಯಮಗಳು ಮಾಡಬೇಕಾದ ಕಾರ್ಯವನ್ನು ಹವ್ಯಕ ಮಹಾಸಭೆ ಮಾಡುತ್ತಿದೆ ಎಂದು ಮಹಾಸಭೆಯ ಕಾರ್ಯವನ್ನು ಅಭಿನಂದಿಸಿದರು.

ಬಿಂದು ಜೀರಾ ಕಂಪನಿಯ ಸಂಸ್ಥಾಪಕರಾದ ಕೆ.  ಸತ್ಯಶಂಕರ ಮಾತನಾಡಿ, ಯಶಸ್ಸೆಂದರೆ ಹಣಗಳಿಸುವುದಲ್ಲ. ನಮ್ಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರುವುದೇ ನಿಜವಾದ ಯಶಸ್ಸು. ನನಗೆ ಆ ತೊಂದರೆ ಇದೆ, ಈ ಸಮಸ್ಯೆ ಇದೆ ಎಂದು ಕುಳಿತರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ .ಮನಸ್ಸಿನಲ್ಲಿ ಛಲ ಇದ್ದರೆ ಯಶಸ್ಸು ಗಳಿಸಲು ಸಾಧ್ಯ. ಸಾಧನೆಯ ಹಾದಿಯಲ್ಲಿ ತೃಪ್ತಿ ಇರಬೇಕು. ಆದರೇ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲ ಇರಬೇಕು ಎಂದು ಕಿವಿಮಾತು ಹೇಳಿದರು.

ಉನ್ನತ ಶಿಕ್ಷಣ ಓದಿಸಲು ಕಷ್ಟವಿದ್ದರಿಂದ ಪೌರೋಹಿತ್ಯ ಮಾಡಲು ಮನೆಯಲ್ಲಿ ಸೂಚಿಸಿದರು. ಆದರೆ ಅದಕ್ಕೆ ಮನಸ್ಸು ಒಪ್ಪದ ಕಾರಣ, ರಿಕ್ಷಾ ಚಾಲನೆ, ಕಾರು ಬಾಡಿಗೆ, ಫೈನಾನ್ಷಿಯಲ್ ಸರ್ವೀಸ್ ಮುಂತಾದ ಉದ್ಯಮಗಳನ್ನು ಮಾಡುತ್ತಾ, ಮುಂದೆ ನೀರು, ಬಿಂದು ಜೀರಾ ಸೇರಿದಂತೆ ಹಲವು ಉದ್ಯಮವನ್ನು ಮಾಡಿ, ಸಾವಿರಾರು ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ ಎಂದು ತಮ್ಮ ಯಶಸ್ವಿ ಜೀವನದ ಮೆಟ್ಟಿಲುಗಳನ್ನು ನೆನಪಿಸಿಕೊಂಡರು.

ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ವಿಜಯೀ ಭವ ಅಂದರೆ ಅದು ಸಭಾಸದರಾಗಿ ಆಗಮಿಸಿದವರಿಗೆ ಅನ್ವಯಿಸುವುದಾಗಿದೆ. ಅಭ್ಯಾಗತರು ತಮ್ಮ ಕ್ಷೇತ್ರದಲ್ಲಿ ವಿಜಯಿಗಳಾಗಿ ಆಗಿದೆ.  ಅವರು ತಮ್ಮ ಅನುಭವವನ್ನು ಈ ಮೂಲಕ ಸಮಾಜಕ್ಕೆ ತೆರೆದಿಡುತ್ತಿದ್ದು, ಅವರ ಅನುಭವವನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡು ಉತ್ತಮ ಕಾರ್ಯಮಾಡಲು ಪ್ರವೃತ್ತರಾದಾಗ ಈ ಕಾರ್ಯಕ್ರಮ  ಸಾರ್ಥಕವಾಗುತ್ತದೆ. ನಾವು ಪ್ರಯತ್ನ ಪಟ್ಟಾಗ ಮಾತ್ರ ಭಗವಂತನ ಬೆಂಬಲ ಸಿಗಲು ಸಾಧ್ಯವಾಗಿದ್ದು, ಸಾಧನೆ ಮಾಡಲು ಸಾಧ್ಯ ಎಂದರು.

ತಮ್ಮ ತಮ್ಮ ಕ್ಷೇತ್ರದಲ್ಲಿ 8 ಯಶಸ್ವಿಗಳಾದ ನಮ್ಮ ಸಮಾಜದ ವ್ಯಕ್ತಿಗಳನ್ನು ಕರೆಸಿ, ಪ್ರತಿತಿಂಗಳು ಈ ರೀತಿಯ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ ಎಂದರು.

ಮೋಹನ ಭಾಸ್ಕರ ಹೆಗಡೆ, ಸೀತಾ ಕೋಟೆ, ರವಿ ಹೆಗಡೆ ಹಾಗೂ ಸತ್ಯಶಂಕರ ಕೆ ಅವರೊಂದಿಗೆ ಸಂವಾದ ನಡೆಸಿಕೊಟ್ಟರು. ಡಾ. ಬಿ ಕೆ ಎಸ್ ವರ್ಮಾ, ರವಿ ಹೆಗಡೆ ಹಾಗೂ ಸತ್ಯಶಂಕರ ಕೆ ಅವರನ್ನು ಹವ್ಯಕ ಮಹಾಸಭೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಗ಼ಜಾನನ ಶರ್ಮಾ ಅವರು ರಚಿಸಿದ ಘೋಷ ಗಾನಕ್ಕೆ ಡಾ.ಬಿ ಕೆ. ಎಸ್. ವರ್ಮಾಅವರು ವಿಜಯ ಧ್ವಜಧಾರಿಯ ಸುಂದರವಾದ ಚಿತ್ರವನ್ನು ಸ್ಥಳದಲ್ಲೇ ರಚಿಸಿದರು. ಸಾಕೇತ ಶರ್ಮಾ, ಪೃಥ್ವಿ ಭಟ್ ಹಾಗೂ ಗುರುಕಿರಣ್ ಹೆಗಡೆ ಘೋಷಗಾನಕ್ಕೆ ಧ್ವನಿಯಾದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ವಾನ್ ಸುಬ್ರಾಯ್ ಭಟ್ ಹಾಗೂ ಪ್ಂಡಿತ ಗುರುಮೂರ್ತಿ ವೈದ್ಯ ಅವರಿಂದ ಸಂತೂರ್ ವಾದನ ಸಭಾಸದರ ಮನರಂಜಿಸಿತು.

ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣು ವಿಘ್ನೇಶ್ ಸಂಪ ಸ್ವಾಗತಿಸಿದರು, ಉಪಾದ್ಯಕ್ಷ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್ ಯಲ್ಲಾಪುರ, ಸಾಲೆಕೊಪ್ಪ ಶ್ರೀಧರ್ ಭಟ್ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreHavyaka MahasabhaKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaRavi Hegadeಬೆಂಗಳೂರುರವಿ ಹೆಗಡೆಹವ್ಯಕ ಮಹಾಸಭೆ
Share198Tweet123Send
Previous Post

ವಾರ ಭವಿಷ್ಯ: ಯಾವ ರಾಶಿಗೆ ಯಾವ ಫಲ? 14.11.2021 to 20.11.2021

Next Post

ಶ್ರದ್ಧೆ, ಗುರಿ ಇಲ್ಲದ ಶಿಕ್ಷಣದಿಂದ ವಿದ್ಯಾರ್ಥಿಗಳ ಸಾಧನೆ ಕ್ಷೀಣ: ಜಗದೀಶ್ ಖೇದ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶ್ರದ್ಧೆ, ಗುರಿ ಇಲ್ಲದ ಶಿಕ್ಷಣದಿಂದ ವಿದ್ಯಾರ್ಥಿಗಳ ಸಾಧನೆ ಕ್ಷೀಣ: ಜಗದೀಶ್ ಖೇದ

ಶ್ರದ್ಧೆ, ಗುರಿ ಇಲ್ಲದ ಶಿಕ್ಷಣದಿಂದ ವಿದ್ಯಾರ್ಥಿಗಳ ಸಾಧನೆ ಕ್ಷೀಣ: ಜಗದೀಶ್ ಖೇದ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಸಿಡಿಲು ಬಡಿದು 50 ಕುರಿಗಳು ಸಾವು

ಶಿವಮೊಗ್ಗ | ಸಿಡಿಲು ಬಡಿದು 50 ಕುರಿಗಳು ಸಾವು

May 18, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

ಬೆಂಗಳೂರು | ಹೂಡಿ ಹಾಲ್ಟ್ ನಿಲ್ದಾಣದಲ್ಲಿ ಮೆಮು ರೈಲುಗಳ ನಿಲುಗಡೆ ತಾತ್ಕಾಲಿಕ ರದ್ದು

May 18, 2026
ಬೆಳಗಾವಿಯಲ್ಲಿ ಬೆಂಗಳೂರು – ಲೋಕಮಾನ್ಯ ತಿಲಕ ಟರ್ಮಿನಸ್ ರೈಲಿಗೆ ಚಾಲನೆ

ಬೆಳಗಾವಿಯಲ್ಲಿ ಬೆಂಗಳೂರು – ಲೋಕಮಾನ್ಯ ತಿಲಕ ಟರ್ಮಿನಸ್ ರೈಲಿಗೆ ಚಾಲನೆ

May 18, 2026
ಮೇ 20ರಿಂದ KSRTC ನೌಕರರ ಮುಷ್ಕರ | ಶಿವಮೊಗ್ಗದಲ್ಲೂ ತಟ್ಟಲಿದೆ ಬಿಸಿ | ಬೇಡಿಕೆಗಳೇನು?

ಮೇ 20ರಿಂದ KSRTC ನೌಕರರ ಮುಷ್ಕರ | ಶಿವಮೊಗ್ಗದಲ್ಲೂ ತಟ್ಟಲಿದೆ ಬಿಸಿ | ಬೇಡಿಕೆಗಳೇನು?

May 18, 2026
ವಿಶ್ವ ಪರಿಸರ ದಿನ | ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಗಿಂಗ್ ಅಭಿಯಾನ ಯಶಸ್ವಿ

ವಿಶ್ವ ಪರಿಸರ ದಿನ | ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಗಿಂಗ್ ಅಭಿಯಾನ ಯಶಸ್ವಿ

May 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL