ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಡೀ ಪ್ರಪಂಚದಲ್ಲಿ ಮೋದಿಯ ತಾಯಿಯಂತವರು ಸಿಗುವುದು ಬಹಳ ಅಪರೂಪ ಎಂದು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, K S Eshwarappa ಪ್ರಧಾನಿ ಮೋದಿ PM Modi ಅವರ ತಾಯಿ ಹೀರಾ ಬೆನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಶ್ರದ್ಧೆಯಿಂದ, ಪ್ರೀತಿಯಿಂದ, ತಾಯಿಯನ್ನು ಮೋದಿ ಕಾಣುತ್ತಿದ್ದರು. ಉನ್ನತ ಸ್ಥಾನದಲ್ಲಿರುವ ಮಕ್ಕಳನ್ನು ಎಷ್ಟು ಸಂಸ್ಕಾರದಿಂದ ಬೆಳೆಸಿದ್ದಾರೆ ಎಂಬುದು ಮೋದಿ ಅವರ ತಾಯಿ ತೋರಿಸಿದ್ದಾರೆ. ತಾಯಿ ಹೇಗಿರಬೇಕು ಎಂದು ನರೇಂದ್ರ ಮೋದಿಯವರ ತಾಯಿಯವರನ್ನು ನೋಡಿ ಕಲಿಯಬೇಕು. ಮಗ ಹೇಗಿರಬೇಕು ಎಂಬುದು ನರೇಂದ್ರ ಮೋದಿಯವರನ್ನು ನೋಡಿ ಕಲಿಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯವರನ್ನು ನೋಡಿದಾಗ ತಾಯಿ ಮತ್ತು ಮಗ ಹೀಗೂ ಬದುಕುತ್ತಾರಾ ಎಂದು ಮೂಗಿಗೆ ಬೆರಳಿಡುವಂತೆ ಭಾಸವಾಗುತ್ತದೆ ಎಂದು ಹೇಳಿದ ಅವರು, ಹಿಂದೂ ಮುಸಲ್ಮಾನರು ಸೇರಿದಂತೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂಬುದು ಹೀರಾಬೆನ್ ರಿಂದ ಮೋದಿಗೆ ಬಂದ ಸಂಸ್ಕಾರವಾಗಿದೆ. ತಾಯಿಯಿಂದ ಪಡೆದ ಸಂಸ್ಕಾರವನ್ನು ದೇಶಕ್ಕೆ ಪ್ರಪಂಚಕ್ಕೆ ತಿಳಿಸಿಕೊಟ್ಟ ನಾಯಕ ನರೇಂದ್ರ ಮೋದಿ ಎಂದು ತಿಳಿಸಿದರು.
Also read: ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತಾ ವೈಫಲ್ಯವಾಗಿಲ್ಲ: ಸಿಆರ್‌ಪಿಎಫ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post