ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸುರಿದ ಮುಂಗಾರು ಪೂರ್ವ ಮಹಾಮಳೆಗೆ ಸಾರ್ವಜನಿಕರು ಹಾಗೂ ವ್ಯಾಪಾರಸ್ತರು ತತ್ತರಿಸಿ ಹೋಗಿದ್ದಾರೆ.
ಮಲ್ಲೇಶ್ವರಂನಲ್ಲಿರುವ ನಿಹಾಲ್ ಜ್ಯುವೆಲರಿ ಶಾಪ್’ಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, 50 ಸಾವಿರ ರೂ. ಹಣ, ಚಿನ್ನದ ಆಭರಣ ಹಾಗೂ ಬೆಳ್ಳಿಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಚರಂಡಿಯಿಂದ ಕೊಚ್ಚಿ ಬಂದ ನೀರು ಜ್ಯುವೆಲರ್ ಶೋರೂಂ ಒಳಗೆ ನುಗ್ಗಿದ ಪರಿಣಾಮ ಒಡವೆ ಹಾಗೂ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪರಿಣಾಮವಾಗಿ 2.5 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗಿದೆ.
Also read: ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು ವಿಧಿವಶ
ಘಟನೆ ಹಿನ್ನೆಲೆಯಲ್ಲಿ ಶೋರೂಂ ಮಾಲಕಿ ಪ್ರಿಯಾ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದು, ನೀರು ನುಗ್ಗಿದ ತಕ್ಷಣ ಕರೆ ಮಾಡಿದರೂ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ದೂರಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















