ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚುನಾವಣೆಯ ಮುಗಿದು ಮೊದಲ ವಿಧಾನಸಭೆ ಕಲಾಪ ಇಂದು ಆರಂಭವಾಗಿದ್ದು, ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಹಂಗಾಮಿ ಸ್ಪೀಕರ್ ಅವರ ಸೂಚನೆಯನ್ನು ಉಲ್ಲಂಘಿಸಿ ಗೊಂದಲ ಸೃಷ್ಠಿಸಿರುವ ಪ್ರಕರಣಗಳು ನಡೆದಿವೆ.
ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಬಿಜೆಪಿಯ ಭಾಗೀರಥಿ ಮುರುಲ್ಯಾ Bhagirathi Marulaiah ಅವರು ಇಂದಿನ ಸಭೆಯಲ್ಲಿ ನನ್ನ ಕುಲ ದೇವರಾದ ಸತ್ಯಸರಮನಿ, ಸತ್ಯಪದನಾಡಿ ಅಮ್ಮನವರು ಹಾಗೂ ಮತದಾರರ ಭಾಂದವರ ಪರವಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಈ ವೇಳೆ ಕೆಲ ಕಾಲ ಗೊಂದಲಕ್ಕೆ ಈಡಾದ ಕಾರ್ಯದರ್ಶಿಗಳು ಹೀಗೆ ಮಾಡುವಂತಿಲ್ಲ ಎಂದು ಸೂಚಿಸಿದರು. ಆದರೂ, ಇದನ್ನು ಮುಕ್ತಾಯಗೊಳಿಸಿದ ನೂತನ ಶಾಸಕಿ ಭಾಗೀರಥಿ ಸ್ಪೀಕರ್ ಅವರ ಬಳಿ ನಡೆದು ಧನ್ಯವಾದ ಹೇಳಿ, ಅವರ ಕಾಲಿಗೆ ನಮಸ್ಕರಿಸಿದರು.
ಈ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಇದನ್ನು ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿದ್ದು, ಸ್ಪೀಕರ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವೇಳೆ ಶಾಸಕಿ ಭಾಗೀರಥಿ ಅವರಿಗೆ ನಿಯಮದಂತೆ ಮಾತ್ರ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಪಾಠ ಮಾಡಲು ಮುಂದಾದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಯತ್ನಾಳ್ ಇಂತಹ ಸಂಪ್ರದಾಯವನ್ನು ಮೊದಲು ಆರಂಭಿಸಿದ್ದು ಯಾರು? ಅವರಿಗೆ ಏಕೆ ಹೇಳಲಿಲ್ಲ ಎಂದು ಚಾಟಿ ಬೀಸಿದರು..
Also read: ಬೆಂಗಳೂರಿನಲ್ಲಿ ಮಹಾಮಳೆಗೆ ಕೊಚ್ಚಿ ಹೋಯ್ತು ಜ್ಯುವೆಲರಿ ಶಾಪ್: ಅಪಾರ ನಷ್ಟ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post