ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಸೊರಬ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅತ್ಯಧಿಕ ಮತಗಳ ಅಂತರದಿಂದ ಜಯ ಗಳಿಸಿರುವ ಯುವಕರ ಕಣ್ಮಣಿ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ Madhu Bangarappa ಅವರಿಗೆ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುವಂತೆ ತಾಲೂಕು ಭೋವಿ ಸಮಾಜ ಆಗ್ರಹಿಸಿದೆ.
ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಭಾರೀ ಮತಗಳ ಅಂತರದಿಂದ ಗೆದ್ದ ನೂತನ ಶಾಸಕ ಮಧು ಬಂಗಾರಪ್ಪ ಅವರನ್ನು ತಾಲೂಕು ಭೋವಿ ಸಮಾಜವು ಅಭಿನಂದನೆ ಸಲ್ಲಿಸುತ್ತದೆ. ಅದೇ ವೇಳೆ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ದರ್ಜೆಯ ಉನ್ನತ ಖಾತೆಯನ್ನು ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸುತ್ತದೆ ಎಂದು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎಚ್. ಜಯಪ್ಪ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಂತೆಯೇ ಮಧು ಬಂಗಾರಪ್ಪ ಅವರು ಕೂಡ ಸಮಾಜದಲ್ಲಿ ಶೋಷಿತ ಸಮಾಜದ ಪರವಾದ ಕಾಳಜಿ ಹೊಂದಿದ್ದಾರೆ. ಅಭಿವೃದ್ದಿ ವಿವಾದಕ್ಕೆ ಯಾವುದೇ ಜಾತಿ, ಧರ್ಮಕ್ಕೆ ಸಿಮೀತವಾಗದೆ ಎಲ್ಲರನ್ನ ಅಭಿವೃದ್ದಿ ಯೇ ಮುಖ್ಯ ಎನ್ಜುವ ಧೋರಣೆ ಹೊಂದಿದವರು. ಅವರಿಗೆ ಸಚಿವ ಸ್ಥಾನ ನೀಡಿದರೆ ಸೊರಬ ಕ್ಷೇತ್ರದ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೂ ಅನುಕೂಲವಾಗಲಿದೆ ಎಂದು ಜಯಪ್ಪ ತಿಳಿಸಿದ್ದಾರೆ.
Also read: ಸ್ಪೀಕರ್ ಸೂಚನೆ ಉಲ್ಲಂಘಿಸಿ ಕುಲದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ ಬಿಜೆಪಿ ಶಾಸಕಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post