ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಡುವ ಕಥೆಗಳು… ಗುನುಗುವ ಗೀತೆಗಳು… ಒಂದೇ ವೇದಿಕೆಯಲ್ಲಿ ಕಥೆ ಓದುವ, ಕವನ ವಾಚಿಸುವ ಮತ್ತು ರಂಗ ಗೀತೆಗಳನ್ನು ಹಾಡುವ ವಿನೂತನ ಕಾರ್ಯಕ್ರಮಕ್ಕೆ ಯುಗಾದಿ ಹಬ್ಬದ ದಿನದಂದು ಚಾಲನೆ ನೀಡಲಾಯಿತು.
ಹಿರಿಯ ರಂಗಭೂಮಿ, ಟಿವಿ ಧಾರಾವಾಹಿ ಮತ್ತು ಸಿನಿಮಾ ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಅವರ ನೇತೃತ್ವದ, ತಾರಾ ಅರೇನಾ’ ತಂಡ ರೂಪಿಸಿರುವ ಈ ಹೊಸತನದ ಪ್ರಯೋಗಕ್ಕೆ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್, ಕವಿ ಜಯಂತ ಕಾಯ್ಕಿಣಿ, ಕಥೆಗಾರ ವಸುಧೇಂದ್ರ, ಕವಿಯಿತ್ರಿ ಪ್ರತಿಭಾ ನಂದಕುಮಾರ್ ಚಾಲನೆ ನೀಡಿದರು.
ಜನಪ್ರಿಯ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಅವರ ತಂಡ ರಂಗಗೀತೆಗಳನ್ನು ಪ್ರಸ್ತುತ ಪಡಿಸಿತು. ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿ ತಿಂಗಳು ನಾಲ್ಕನೇ ಭಾನುವಾರ ಬೆಂಗಳೂರಿನ ಜಯನಗರದ ‘ಸನಾತನ’ ಕಲಾ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post