ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಹಾಗೂ ಕಣ್ಣೂರು ನಡುವಿನ ಎಕ್ಸ್’ಪ್ರೆಸ್ ರೈಲನ್ನು ಕೋಜಿಕೋಡ್’ವರೆಗೂ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, 16511/16512 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು- ಕಣ್ಣೂರು- ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಕೋಜಿಕೋಡ್’ವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದೆ.
16511 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು- ಕೋಜಿಕೋಡ್ ಎಕ್ಸ್’ಪ್ರೆಸ್ ರೈಲು ಕಣ್ಣೂರಿಗೆ ಬೆಳಿಗ್ಗೆ 10.55 ಗಂಟೆಗೆ ಆಗಮಿಸಿ 11.00 ಗಂಟೆಗೆ ನಿರ್ಗಮಿಸಲಿದೆ. ಮಾರ್ಗದಲ್ಲಿ ಥಲಸ್ಸೇರಿ ನಿಲ್ದಾಣಕ್ಕೆ ಬೆಳಿಗ್ಗೆ 11.20 ಗಂಟೆಗೆ ಆಗಮಿಸಿ 11.21 ಗಂಟೆಗೆ ನಿರ್ಗಮಿಸಲಿದೆ, ವಡಕರಾ ನಿಲ್ದಾಣಕ್ಕೆ ಬೆಳಿಗ್ಗೆ 11.41 ಗಂಟೆಗೆ ಆಗಮಿಸಿ 11.42 ಗಂಟೆಗೆ ನಿರ್ಗಮಿಸಲಿದೆ, ಕೋಯಿಲಾಂಡಿ ನಿಲ್ದಾಣಕ್ಕೆ ಬೆಳಿಗ್ಗೆ 11.58 ಗಂಟೆಗೆ ಆಗಮಿಸಿ 11.59 ಗಂಟೆಗೆ ನಿರ್ಗಮಿಸಲಿದ್ದು ಕೋಜಿಕೋಡ್ ನಿಲ್ದಾಣವನ್ನು ಮಧ್ಯಾಹ್ನ 12.40 ಗಂಟೆಗೆ ತಲುಪಲಿದೆ.
16512 ಸಂಖ್ಯೆಯ ಕೋಜಿಕೋಡ್- ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಕೋಜಿಕೋಡ್ ನಿಲ್ದಾಣದಿಂದ ಮಧ್ಯಾಹ್ನ 03.30 ಗಂಟೆಗೆ ಹೊರಡಲಿದ್ದು ಕೋಯಿಲಾಂಡಿ ನಿಲ್ದಾಣಕ್ಕೆ ಮಧ್ಯಾಹ್ನ 03.52ಕ್ಕೆ ಆಗಮಿಸಿ 03.53ಕ್ಕೆ ನಿರ್ಗಮಿಸಲಿದೆ. ವಡಕರ ನಿಲ್ದಾಣಕ್ಕೆ ಸಂಜೆ 04.12 ಕ್ಕೆ ಆಗಮಿಸಿ 04.13 ಕ್ಕೆ ಹೊರಡಲಿದೆ, ಥಲಸ್ಸೇರಿ ನಿಲ್ದಾಣಕ್ಕೆ ಸಂಜೆ 04.34ಕ್ಕೆ ಆಗಮಿಸಿ 04.35 ಕ್ಕೆ ಹೊರಡಲಿದೆ. ಕಣ್ಣೂರು ನಿಲ್ದಾಣಕ್ಕೆ ಸಂಜೆ 05.00 ಗಂಟೆಗೆ ಆಗಮಿಸಿ 05.05ಕ್ಕೆ ಹೊರಡಲಿದೆ.
ಉಳಿದಂತೆ ಈ ರೈಲುಗಳಿಗೆ ಬೆಂಗಳೂರು ಮತ್ತು ಪಯ್ಯನೂರು ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















