ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಧ್ಯಪ್ರದೇಶ ಸರ್ಕಾರವು ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ ನ ಕುಲಾಧಿಪತಿಯಾಗಿ ಕರ್ನಾಟಕದ ಯಲ್ಲಾಪುರ ತಾಲೂಕಿನ ಕೋಸಗುಳಿಯ ಪ್ರೊ.ಯಜ್ಞೇಶ್ವರ ಶಾಸ್ತ್ರಿ #Prof. Yagneshwara Shastri ಅವರನ್ನು ನೇಮಕ ಮಾಡಲಾಗಿದೆ.
Also read: ಮಂಗನ ಕಾಯಿಲೆ | ಮಲೆನಾಡಿಗರು ಕಾಡಿಗೆ ತೆರಳುವ ಮುನ್ನ ಈ ಕ್ರಮ ಅನುಸರಿಸಿ | ಡಿಸಿ
ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರೂ, ಶಿಕ್ಷಣ ತಜ್ಞರೂ ಆಗಿರುವ ಯಜ್ಞೇಶ್ವರ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಪ್ರಸ್ತುತ ಮಧ್ಯಪ್ರದೇಶ ಸಂಸ್ಕೃತಿ ಸಚಿವಾಲಯದ ಆಚಾರ್ಯ ಶಂಕರ ಸಾಂಸ್ಕೃತಿಕ ಏಕ್ತಾ ನ್ಯಾಸದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೊದಲು ಗುಜರಾತ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕ, ಪ್ರೊಫೆಸರ್ ವಿಭಾಗ ಮುಖ್ಯಸ್ಥರಾಗಿ ನಲವತ್ತು ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post