ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಇಂದು ವಿಶ್ವ ಕಾರ್ಮಿಕರ ದಿನಾಚರಣೆ ಈ ಹಿನ್ನೆಲೆಯಲ್ಲಿ ಉಣ್ಣುವ ಕೈಗಳಿಗೆ, ಮನೆಗಳ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯುವ ಕೈಗಳೇ ಆಧಾರ. ಅಂತಹ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಮಿಕರಿಗೆ ಶುಭಾಶಯ ತಿಳಿಸಿದ್ದಾರೆ.
ಉಣ್ಣುವ ಕೈಗಳಿಗೆ, ಮನೆಗಳ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯುವ ಕೈಗಳೇ ಆಧಾರ. ಅಂತಹ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.#LabourDay
1/2— H D Kumaraswamy (@hd_kumaraswamy) May 1, 2021
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರ್ಮಿಕರಿದ್ದರೆ ಮಾಲೀಕರಾಗೋದು, ಮಾಲೀಕ ಕಾರ್ಮಿಕ ಇಬ್ಬರೂ ಪರಸ್ಪರ ಪೂರಕವಾಗಿರಬೇಕು ಹಾಗಾಗಿ ಕಾರ್ಮಿಕರ ಶೋಷಣೆ ಕೊನೆಗೊಳ್ಳಲಿ ಎಂದು ಆಶಿಸಿದ್ದಾರೆ.
ಕೊರೊನಾ ಕಗ್ಗತ್ತಲು ಕಳೆದು ಕಾರ್ಮಿಕರ ಬಾಳಲ್ಲಿ ಹೊಸಬೆಳಕು ಮೂಡಲಿ. ಎಲ್ಲರ ಬದುಕು ಹಸನಾಗಲಿ ಎಂದು ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post