ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ಇಂದು ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರ ಸಮ್ಮುಖದಲ್ಲಿ ಸೊರಬ ವಿಧಾನಸಭಾ ಶಾಸಕ ಎಸ್. ಮಧು ಬಂಗಾರಪ್ಪ, Madhu Bangarappa ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯನಾಯ್ಕ್ Sharadha Pooryanaik ಪ್ರಮಾಣವಚನ ಸ್ವೀಕರಿಸಿದರು.
ಶಾರದಾ ಪೂರ್‍ಯನಾಯ್ಕ್ ಪ್ರಮಾಣವಚನ ಸ್ವೀಕಾರ:
ಸಂವಿಧಾನ ಮತ್ತು ದೇವರ ಹೆಸರಿನಲ್ಲಿ ವಿಧಾನಸೌಧದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರ ಸಮ್ಮುಖದಲ್ಲಿ ಶಾಸಕರಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯನಾಯ್ಕ್ ಪ್ರಮಾಣವಚನ ಸ್ವೀಕರಿಸಿದರು.

Also read: ನಾಡಿಗೆ ಶ್ರೀ ವ್ಯಾಸರಾಜರ ಕೊಡುಗೆ ಅಪೂರ್ವ: ಶ್ರೀ ವಿದ್ಯಾಶ್ರೀಶ ತೀರ್ಥರ ಅಭಿಮತ
ಚುನಾವಣೆಯಲ್ಲಿ ಹಗಲಿರುಳು ದುಡಿದು, ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ನನ್ನನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟ ಕ್ಷೇತ್ರದ ಮತದಾರರಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ತಿಳಿಸಿದ್ದಾರೆ.










Discussion about this post