ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಭವಿಷ್ಯದಲ್ಲಿ ಬೆಳೆಯಲು ಅವಕಾಶವಿರುವುದರಿಂದ ಸ್ವತಃ ಮನಸಾರೆ ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಸೊರಬ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಎಂಬುದು ಒಂದು ರೀತಿಯಲ್ಲಿ ಪರೀಕ್ಷೆಯಿದ್ದಂತೆ.ಈ ಚುನಾವಣಾ ಪರೀಕ್ಷೆಯಲ್ಲಿ ಪಾಸ್-ಫೇಲ್ ಇವೆರೆಡೇ ಆಯ್ಕೆ ಇರುವುದು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾಯಕತ್ವಕ್ಕೆ ಸೋಲಾಯಿತೆಂಬುದಲ್ಲ. ನಾಯಕತ್ವ ಎಂದಿಗೂ ಸೋಲುವುದಿಲ್ಲ ಎಂದು ಮಧುಬಂಗಾರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಜೆಡಿಎಸ್‌ನಲ್ಲಿ ಎಂದಿಗೂ ಅಧಿಕಾರ ಅನುಭವಿಸಿಲ್ಲ. ಬರಲಿರುವ ಎಪ್ರಿಲ್ ತಿಂಗಳಿನಲ್ಲಿ ಬೃಹತ್ ಸಮಾವೇಶ ಆಯೋಜಿಸುತ್ತಿದ್ದು, ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಸೇರಿಸುತ್ತೇನೆ. ಮತ್ತು ಇದೇ ಸಂದರ್ಭಧಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post