ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಮಂತ್ರಿ ನರೇಂದ್ರ ಮೋದಿ PM Narendra Modi ಅವರ ಸ್ಫೂರ್ತಿಯೊಂದಿಗೆ ಚಲನಚಿತ್ರವೊಂದು ಇದೇ ಮಾರ್ಚ್ 1ಕ್ಕೆ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಹೌದು “ನಮೋ ಮೋದಿ” Namo Modi ಎಂಬ ಹೆಸರಿನ ಚಿತ್ರವನ್ನು ರಂಗಾಯಣ ನಿರ್ದೇಶಕರಾಗಿದ್ದ ರಮೇಶ್ ಪರವೀನಾಯ್ಕರ್ ಪರದೆಯ ಮೇಲೆ ತರುತ್ತಿದ್ದು, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಈ ಎಲ್ಲದರ ಜವಾಬ್ದಾರಿಯನ್ನು ಹೊತ್ತಿದ್ದಾರೆ.

Also read: ಮಹಾದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್ ನೇರ ಕಾರಣ: ಬಸವರಾಜ ಬೊಮ್ಮಾಯಿ
ಟೀಸರ್ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರೊ.ರಂಗೇಗೌಡ ಮಾತನಾಡಿ, ನಮೋ ಭಾರತ್ ಅಪ್ಪಟ ದೇಶಪ್ರೇಮದ ಕಥೆಯಾಗಿದ್ದು, ರೈತನೇ ಚಿತ್ರದಲ್ಲಿ ನಿಜವಾದ ನಾಯಕ. ಹಳ್ಳಿಯ ತಂದೆಗೆ ಸಾಕ್ಷಿಭೂತ ರೈತ. ಕೌಟುಂಬಿಕ ನೆಲೆಯಲ್ಲಿ ಗ್ರಾಮಗಳ ಸಮಸ್ಯೆಗಳ ಸೈನಿಕನ ಸಂಘರ್ಷದ ಚಿತ್ರವಿದು ಎಂದರು.

ಪತ್ರಕರ್ತ ಶಂಕರ್ ಪಾಗೋಜಿ ಮಾತನಾಡಿ, ಎಲ್ಲರೂ ನೋಡಲೇಬೇಕಾದ ಚಿತ್ರ ಇದಾಗಿದೆ. ಸೈನಿಕನ ಹೋರಾಟವನ್ನು ಬಹಳ ಮನೋಜ್ಞವಾಗಿ ತೋರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ನಟಿ ಭವ್ಯಾ, ನಟಿ ಸುಷ್ಮಾ ರಾಜ್ ಸಹ ನಿರ್ದೇಶಕ ಬಿ. ರಾಜರತ್ನಂ, ಲಹರಿ ವೇಲು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post