ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ಪ್ರತಿಷ್ಠಿತ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ #NSS ಘಟಕವು ರಾಮನಗರ ಜಿಲ್ಲೆಯ ಶ್ರೀ ರಾಮದೇವರ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಒಂದು ದಿನ ಪ್ಲಾಸ್ಟಿಕ್ ಮುಕ್ತ ಶಿಬಿರ #PlasticFreeScheme ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕಾಲೇಜಿನ ಎನ್’ಎಸ್’ಎಸ್ ಘಟಕವು ರಾಮದೇವರ ಬೆಟ್ಟದಲ್ಲಿ ಒಂದು ದಿನದ ವಿಶೇಷ ಶಿಬಿರವನ್ನು ಆಯೋಜಿಸಿತ್ತು. ಎನ್’ಎಸ್’ಎಸ್ ಸ್ವಯಂ ಸೇವಕರು ಚಾರಣದೊಂದಿಗೆ ಬೆಟ್ಟದ ರಣಹದ್ದು ಪಕ್ಷಿಧಾಮದಲ್ಲಿ ಪ್ಲಾಸ್ಟಿಕ್ ಮುಕ್ತ ಆಂದೋಲನವನ್ನು ನಡೆಸಿದೆ.
ಪ್ರಮುಖವಾಗಿ, ಇಡೀ ಪಕ್ಷಿಧಾಮದಲ್ಲಿ ಅಲ್ಲಲ್ಲಿ ಎಸೆಯಲ್ಪಟ್ಟಿದ್ದ ಪ್ಲಾಸ್ಟಿಕ್ ಕವರ್ #PlasticCover ಹಾಗೂ ನೀರಿನ ಬಾಟಲಿಗಳನ್ನು ಸಂಗ್ರಹಿಸಿದ ಸ್ವಯಂ ಸೇವಕರು ಮಾದರಿ ಕಾರ್ಯ ನಡೆಸಿದರು. ಸುಮಾರು 10 ಚೀಲಗಳಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಜೊತೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಸ್ವಚ್ಛತೆಯ ಕುರಿತಾಗಿ ಜಾಗೃತಿ ಮೂಡಿಸಿದರು.
ಇಂತಹ ಒಂದು ಮಾದರಿ ಕಾರ್ಯ ಕೈಗೊಂಡ ಕಾಲೇಜಿನ ಎನ್’ಎಸ್’ಎಸ್ ಘಟಕ ಹಾಗೂ ಸ್ವಯಂ ಸೇವಕರನ್ನು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಶಂಸಿಸಿದರು.
ಇದರಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಮುಂದಿನ ಪೀಳಿಗೆಯವರಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯ ಬಗ್ಗೆ ವಿಶೇಷ ಅರಿವು ಮೂಡಿಸುವಂತಹ ಕಾರ್ಯ ಯಶಸ್ವಿಯಾಯಿತು.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎನ್’ಎಸ್’ಎಸ್ ಸಂಚಾಲಕರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















