ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವೇಗವಾಗಿ ಸಾಗುತ್ತಿದ್ದ ಹಾಲು ಸರಬರಾಜು ವಾಹನ ಉರುಳಿಬಿದ್ದು, ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹೊಸೂರು ರಸ್ತೆ (ಎನ್‌ಎಚ್ -7) ಸರ್ವಿಸ್ ಲೇನ್‌ನಲ್ಲಿ ನಡೆದಿದೆ.
ತಮಿಳುನಾಡು ಮೂಲದವರಾದ ಚಾಲಕ ಕಾರ್ತಿಕ್ ಮತ್ತು ಕ್ಲೀನರ್ ಉದಯ್ ಕುಮಾರ್ ಮೃತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.
ತಮಿಳುನಾಡು ರಾಜ್ಯದ ನಂಬರ್ ಪ್ಲೇಟ್ ಹೊಂದಿದ್ದ ಟ್ರಕ್ ಬೊಮ್ಮಸಂದ್ರದಿಂದ ವೈಟ್ ಫೀಲ್ಡ್’ಗೆ ಹಾಲು ಪೂರೈಕೆ ಮಾಡಲು ಹೋಗುತ್ತಿದ್ದು. ವೇಗವಾಗಿ ಸಾಗುತ್ತಿದ್ದ ಕಾರಣ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಕೋಡಿಹಳ್ಳಿಯ ಪಾಪಣ್ಣ ಬಿಲ್ಡಿಂಗ್ ಬಳಿ ಪಲ್ಟಿಯಾಗಿ ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
Also read: 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಕಾಂಗ್ರೆಸ್: ಮಾಜಿ ಸಿಎಂ ಬೊಮ್ಮಾಯಿ ಟೀಕೆ
ಘಟನೆ ಚಾಲಕನ ಅತಿ ವೇಗವೇ ಕಾರಣವೆಂದು ಹೇಳಲಾಗುತ್ತಿದ್ದು, ಅಪಘಾತವನ್ನು ಕಂಡ ಸ್ಥಳೀಯ ರಮೇಶ್ ಕುಮಾರ್ ಎಂಬುವವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















