ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಆರ್‍ಎನ್‍ಆರ್ ಫಿಟ್ ಜಿಮ್ನಾಸ್ಟಿಕ್ಸ್ ಕರ್ನಾಟಕದ ಜಿಮ್ನಾಸ್ಟಿಕ್ಸ್‍ಗಾಗಿ 11 ರಾಷ್ಟ್ರೀಯ ಪದಕಗಳನ್ನು ಗೆದ್ದಿದೆ. ಮಾಜಿ ರಾಷ್ಟ್ರೀಯ ಅಥ್ಲೀಟ್‍ಗಳಾದ ವಿವಿನ್ನೆ ಮತ್ತು ಎಬನೇಜೆರ್ ದಂಪತಿಯ ಕನಸಿನ ಕೂಸಾದ ಆರ್‍ಎನ್‍ಆರ್ ಫಿಟ್ ಜಿಮ್ನಾಸ್ಟಿಕ್ಸ್, ಹಲವಾರು ವರ್ಷಗಳಿಂದಲೂ ಕರ್ನಾಟಕ ರಾಜ್ಯಕ್ಕೆ ಆರ್ಟಿಸ್ಟಿಕ್ ಮತ್ತು ರಿದಮಿಕ್ ಜಿಮ್ನಾಸ್ಟಿಕ್ಸ್‍ನಲ್ಲಿ ಪದಕ ಗೆಲ್ಲುವ ಅಥ್ಲೀಟ್‍ಗಳನ್ನು ಸೃಷ್ಟಿಸುತ್ತಿದೆ.
ಕೋಲ್ಕೊತಾದಲ್ಲಿ ಫೆಬ್ರುವರಿ 2023ರಲ್ಲಿ ನಡೆದ ರಾಷ್ಟ್ರೀಯ ಸಬ್ ಜ್ಯೂನಿಯರ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಂಪಿಯನ್‍ಶಿಪ್ 2022-23ರಲ್ಲಿ ಕರ್ನಾಟಕವು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದೆ. ಆರ್‍ಎನ್‍ಆರ್ ಫಿಟ್‍ನ ಇಬ್ಬರು ಜಿಮ್ನಾಸ್ಟ್‍ಗಳಾದ ಅನ್ಯಾ ಮರಿಯಾ ಡಿಸೋಜಾ ಮತ್ತು ಝಿವಾ ಎಸ್ತರ್ ಅವರು ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸಮಗ್ರ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದ ತಂಡದ ಭಾಗವಾಗಿದ್ದರು. ಮತ್ತು ಆರ್‍ಎನ್‍ಆರ್ ಫಿಟ್‍ನ ಶಾಶ್ವತ್ ಎ. ಕೊತವಾಲೆ ವೈಯಕ್ತಿಕ ವಿಭಾಗದಲ್ಲಿ 14 ವರ್ಷದೊಳಗಿನವರ ಪುರುಷರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಇದಲ್ಲದೆ, ಆರ್‍ಎನ್‍ಆರ್ ಫಿಟ್‍ನ ನಾಲ್ವರು ಜಿಮ್ನಾಸ್ಟ್‍ಗಳು ಅಖಿಲ ಭಾರತ ಟಾಪ್ 20 ರ್ಯಾಂಕಿಂಗ್‍ನಲ್ಲಿದ್ದು, ವಿವರ ಈ ಕೆಳಗಿನಂತಿದೆ:
ಮಹಿಳಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಅಖಿಲ ಭಾರತ ಶ್ರೇಯಾಂಕ: ಓಷಿಯಾನಾ ರೆನೀ ಥಾಮಸ್ – 6ನೇ ರ್ಯಾಂಕ್, ಝಿವಾ ಎಸ್ತರ್ ಜೋಯಲ್ – 12ನೇ ರ್ಯಾಂಕ್, ಅನ್ಯಾ ಮರಿಯಾ ಡಿಸೋಜಾ -16ನೇ ರ್ಯಾಂಕ್.
ಪುರುಷರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಅಖಿಲ ಭಾರತ ಶ್ರೇಯಾಂಕ: ಶಾಶ್ವತ್ ಎ. ಕೊತವಾಲೆ – 12ನೇ ರ್ಯಾಂಕ್
ಫೆಬ್ರವರಿ 2023 ರಲ್ಲಿ ಹೈದರಾಬಾದ್‍ನಲ್ಲಿ ನಡೆದ ಸಿಎಂ ಕೊಹಿನೂರ್ ಕಪ್ ಅಂತರಾಷ್ಟ್ರೀಯ ರಿದಮಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ, ಆರ್‍ಎನ್‍ಆರ್ ಫಿಟ್‍ನ ಐವರು ಜಿಮ್ನಾಸ್ಟ್‍ಗಳು ಕರ್ನಾಟಕ ರಾಜ್ಯಕ್ಕಾಗಿ 9 ಪದಕಗಳನ್ನು ಗೆದ್ದಿದ್ದಾರೆ! ಮತ್ತು ಎಲ್ಲಾ ಐವರು ಜಿಮ್ನಾಸ್ಟ್‍ಗಳು ಒಟ್ಟಾರೆ ಶ್ರೇಯಾಂಕದಲ್ಲಿ ತಮ್ಮ ವೈಯಕ್ತಿಕ ವಿಭಾಗಗಳಲ್ಲಿ ಅಗ್ರ 5 ಸ್ಥಾನ ಪಡೆದಿದ್ದಾರೆ. ವಿಜೇತರು ಈ ಕೆಳಗಿನಂತಿದ್ದಾರೆ:
10 ವರ್ಷದೊಳಗಿನವರ ವಿಭಾಗ: ದೀತ್ಯಾ ಕೆ.ಎಂ. ಹೂಪ್‍ನಲ್ಲಿ ಬೆಳ್ಳಿ ಮತ್ತು ರಿಬ್ಬನ್‍ನಲ್ಲಿ ಬೆಳ್ಳಿ ಗೆದ್ದು ಒಟ್ಟಾರೆ 4ನೇ ಸ್ಥಾನ ಪಡೆದರೆ, ಸಾನ್ವಿ ಶರ್ಮಾ ಬಾಲ್‍ನಲ್ಲಿ ಕಂಚು ಗೆದ್ದು ಒಟ್ಟಾರೆ 6ನೇ ಸ್ಥಾನ ಪಡೆದರು.
Also read: ಧಾರವಾಡ ರಂಗಾಯಣದಲ್ಲಿ ಮಾ.17ರಿಂದ ಕರ್ನಾಟಕ ಚಲನಚಿತ್ರೋತ್ಸವ
ಸಬ್ ಜ್ಯೂನಿಯರ್ ವಿಭಾಗ: ಮಿಲಿ ಜೈನ್ ಹೂಪ್‍ನಲ್ಲಿ ಕಂಚು ಗೆದ್ದರು ಮತ್ತು ಬಾಲ್‍ನಲ್ಲಿ ಒಟ್ಟಾರೆ 5ನೇ ಸ್ಥಾನ ಪಡೆದರು.
ಜ್ಯೂನಿಯರ್ ವಿಭಾಗ: ಜರಾಹ್ ಮಿಶ್ರಾ ಹೂಪ್‍ನಲ್ಲಿ ಬೆಳ್ಳಿ, ರಿಬ್ಬನ್‍ನಲ್ಲಿ ಬೆಳ್ಳಿ ಮತ್ತು ಒಟ್ಟಾರೆ 3ನೇ ಸ್ಥಾನ ಪಡೆದರೆ, ಅನುμÁ್ಕ ಸತ್ಯದೇವ್ ಹೂಪ್ ಮತ್ತು ರಿಬ್ಬನ್‍ನಲ್ಲಿ ತಲಾ ಒಂದು ಕಂಚು, ಬಾಲ್‍ನಲ್ಲಿ ಬೆಳ್ಳಿ ಗೆದ್ದು ಒಟ್ಟಾರೆ 4ನೇ ಸ್ಥಾನ ಪಡೆದರು.
ವಿವಿನ್ನೆ, ಸ್ಥಾಪಕರು, ಆರ್‍ಎನ್‍ಆರ್ ಫಿಟ್ ಅವರು ಹೇಳಿದರು, “ದೇಶಾದ್ಯಂತ ಜಿಮ್ನಾಸ್ಟ್‍ಗಳು ಮೊದಲು ತಾವು ಪ್ರತಿನಿಧಿಸುವ ರಾಜ್ಯ, ನಂತರ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ದೇಶಕ್ಕಾಗಿ ಪದಕ ಗೆಲ್ಲಬೇಕು ಎಂಬ ದೃಷ್ಟಿಕೋನದೊಂದಿಗೆ ನಾವು ಆರ್‍ಎನ್‍ಆರ್ ಫಿಟ್ ಅನ್ನು ಸ್ಥಾಪಿಸಿದ್ದೇವೆ. ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ವಿಫುಲ ಅವಕಾಶಗಳಿವೆ ಮತ್ತು ನಾವು ಭಾರತೀಯ ಮಾಜಿ ಅಂತಾರಾಷ್ಟ್ರೀಯ ತರಬೇತುದಾರರಾದ ಶ್ರೀಮತಿ ಮಿನಾರಾ ಬೇಗಮ್ ಅವರ ಮಾರ್ಗದರ್ಶನದಲ್ಲಿ ನುರಿತ ತರಬೇತುದಾರರನ್ನು ನೇಮಕ ಮಾಡಿಕೊಂಡಿದ್ದೇವೆ’’.
ಎಬನೇಜರ್, ಸ್ಥಾಪಕರು, ಆರ್‍ಎನ್‍ಆರ್ ಫಿಟ್ ಅವರು ಸೇರ್ಪಡೆ ಮಾಡಿದರು, “ನಾವು ನಮ್ಮ ಜಿಮ್ನಾಸ್ಟ್‍ಗಳನ್ನು ಕೇವಲ ಪ್ರದರ್ಶನ ನೀಡುವುದಷ್ಟಕ್ಕೇ ತರಬೇತುಗೊಳಿಸುವುದಿಲ್ಲ. ಜತೆಗೆ ಅವರಿಗೆ ಕ್ರೀಡಾ ಪೌಷ್ಟಿಕ ಆಹಾರದ ಬಗ್ಗೆಯೂ ಮಾರ್ಗದರ್ಶನ ನೀಡುತ್ತೇವೆ, ಕ್ರೀಡಾ ಮನಃಶ್ಯಾಸ್ತ್ರದ ಕುರಿತು ಕೌನ್ಸೆಲಿಂಗ್ ನಡೆಸುತ್ತೇವೆ ಮತ್ತು ಕ್ರೀಡಾ ಫಿಸಿಯೊಥೆರಪಿ ಸೆಷೆನ್‍ಗಳನ್ನು ಹಮ್ಮಿಕೊಳ್ಳುತ್ತೇವೆ. ಇದರಿಂದ ಜಿಮ್ನಾಸ್ಟ್‍ಗಳು ಕ್ರೀಡಾಗಳುಗಳಾಗಿ ತಮ್ಮ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ’’.
ಈ ಅದ್ಭುತ ಪದಕ ಸಾಧನೆಯೊಂದಿಗೆ, ಆರ್‍ಎನ್‍ಆರ್ ಫಿಟ್‍ನ ತಂಡವು ಕರ್ನಾಟಕವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್‍ನಲ್ಲಿ ಉತ್ತುಂಗಕ್ಕೆ ಕೊಂಡೊಯ್ಯಲು ಮತ್ತಷ್ಟು ಪದಕಗಳನ್ನು ಗೆಲ್ಲಲು ಉತ್ಸುಕವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post