ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರಧ್ವಜ #National Flag ಇಳಿಸಿ ಕೇಸರಿ ಧ್ವಜವನ್ನು #Kesari Dhwaja ಹಾರಿಸಿದರು ಎಂದು ಹೇಳಿ ಸಮಸ್ಯೆ ಸೃಷ್ಟಿಸಿದವರು ಡಿ.ಕೆ. ಶಿವಕುಮಾರ್, #D K Shivakumar ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವ ಅವರು ರಾಜೀನಾಮೆ ಕೊಡಬೇಕು. ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ #Minister Eshwarappa ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಪುಕೋಟೆಯಲ್ಲಿ #Red Fort ಕೇಸರಿ ಧ್ವಜವನ್ನು ಮುಂದಿನ 300-500 ವರ್ಷಗಳಲ್ಲಿ ಹಾರಿಸಬಹುದು ಎಂದು ಹೇಳಿದ್ದೇನಷ್ಟೇ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ನಾನು ರಾಷ್ಟ್ರಭಕ್ತ ಕಾಂಗ್ರೆಸ್ #Congress ಎಷ್ಟೇ ಪ್ರತಿಭಟನೆ ಮಾಡಿದರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಿರಂಗಯಾತ್ರೆ #Thiranga yathre ಮಾಡಿದವನು ನಾನು. ತುರ್ತು ಪರಿಸ್ಥಿತಿ ವೇಳೆ ಜೈಲಿಗೂ ಹೋಗಿದ್ದೇನೆ. ಕಾಶ್ಮೀರದ ಲಾಲ್‌ಚೌಕ್‌ನಲಿ #Lalchowk ಉಗ್ರಗಾಮಿಗಳ ಭಯವಿಲ್ಲದೆ ಪ್ರಧಾನಿ ನರೇಂದ್ರ ಮೋದಿ #PM Narendra Modi, ಕೇಂದ್ರದ ಮಾಜಿ ಸಚಿವ ಮುರಳಿಮನೋಹರ ಜೋಷಿ #Central Minister Murali Manohar Joshi ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾರಿಸಿ ಬಂದಿದ್ದೇನೆ. ರಾಷ್ಟ್ರಭಕ್ತನಾದ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಜಾಮೀನಿನ ಮೇಲೆ ಹೊರಗಿರುವ ಡಿ.ಕೆ. ಶಿವಕುಮಾರ್ ಲೂಟಿ ಮಾಡಿದ್ದಾರೆ.ಅವರೇ ರಾಜೀನಾಮೆ ಕೊಡಲಿ ಎಂದು ವಾಗ್ದಾಳಿ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post