ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಡಿ.28, ಶನಿವಾರ ಬೆಳಗ್ಗೆ 10 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವಿಶೇಷವಾದ ನೃತ್ಯ ಹಬ್ಬ, ಚಿಣ್ಣರ ನೃತ್ಯ ಸಂಹಿತ, ಮಕ್ಕಳಿಂದ ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ವಿದುಷಿ ಸ್ಮಿತಾ ಶ್ರೀಪತಿರವರ ನಿರ್ದೇಶನದಲ್ಲಿ ಅರ್ಥ ನೃತ್ಯ ಕಲಾಮಂದಿರದ ಮಕ್ಕಳು ಭರತನಾಟ್ಯವನ್ನು, ವಿದುಷಿ ಗೌರಿ ಸಾಗರ್ ರವರ ನಿರ್ದೇಶನದಲ್ಲಿ ಶ್ರೀ ಕಂಠೇಶ್ವರ ಕಲಾ ಕೇಂದ್ರದ ಮಕ್ಕಳು ಭರತನಾಟ್ಯವನ್ನು, ವಿದುಷಿ ಶ್ರೀಮತಿ ಭಾನುಪ್ರಿಯಾ ರಾಕೇಶ್ ರವರ ನಿರ್ದೇಶನದಲ್ಲಿ ಅರ್ಕ ಕಲಾ ಕುಟಿರದ ಮಕ್ಕಳು ಭರತನಾಟ್ಯವನ್ನು, ವಿದುಷಿ ಪದ್ಮಜ ಜಯರಾಮ್ ರವರ ನಿರ್ದೇಶನದಲ್ಲಿ ಶ್ರೀ ನಾಟ್ಯ ಕಲಾರ್ಪಣ ನೃತ್ಯ ಕೇಂದ್ರದ ಮಕ್ಕಳು ಭರತನಾಟ್ಯವನ್ನು ಹಾಗೂ ವಿದ್ವಾನ್ ಕಲಾಯೋಗಿ ಕೆ ಪಿ ಸತೀಶ್ ಬಾಬು ರವರ ನಿರ್ದೇಶನದಲ್ಲಿ ನಾಟ್ಯೇಶ್ವರ ನೃತ್ಯ ಶಾಲೆಯ ಮಕ್ಕಳು ಭರತನಾಟ್ಯ ಜಾನಪದ ನೃತ್ಯವನ್ನು ಮಾಡುತ್ತಿದ್ದಾರೆ.
Also read: ಮೊಬೈಲ್ ಕೊಡದಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಮುಖ್ಯ ಅತಿಥಿಗಳಾಗಿ ಆರ್ ಚಂದ್ರಶೇಖರ್ (ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರಜಿಲ್ಲೆ) ಹಾಗೂ ನೃತ್ಯ ದಿಶಾ ಟ್ರಸ್ಟ್ ನ ನಿರ್ದೇಶಕರು, ಡಾ. ದರ್ಶಿನಿ ಮಂಜುನಾಥ್ ರವರು ಆಗಮಿಸುತ್ತಿದ್ದಾರೆ ಎಂದು ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ಪವಿತ್ರ ಪ್ರಶಾಂತ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post