No Result
View All Result
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ
English Articles

Special Train Between Bengaluru Cantt and Chennai

by ಕಲ್ಪ ನ್ಯೂಸ್
April 3, 2026
0

Kalpa Media House  |  Bengaluru  | To clear the extra rush of passengers during the Summer Holiday season, South Western...

Read moreDetails
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
  • Advertise With Us
  • Grievances
  • About Us
  • Contact Us
Saturday, April 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ನ.20ರಂದು ಪತ್ರಕರ್ತ, ಲೇಖಕ, ಹನುಮಂತ. ಮ. ದೇಶಕುಲಕರ್ಣಿ ಅವರ ಶ್ರೀಕಾರ ಕೃತಿ ಬಿಡುಗಡೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 19, 2022
in ಬೆಂಗಳೂರು ನಗರ
0
ನ.20ರಂದು ಪತ್ರಕರ್ತ, ಲೇಖಕ, ಹನುಮಂತ. ಮ. ದೇಶಕುಲಕರ್ಣಿ ಅವರ ಶ್ರೀಕಾರ ಕೃತಿ ಬಿಡುಗಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಪತ್ರಕರ್ತ, ಲೇಖಕ ಹನುಮಂತ. ಮ. ದೇಶಕುಲಕರ್ಣಿ ಇವರ ಮೂರನೇಯ ಕೃತಿ ಶ್ರೀಕಾರ (ಸುವಿಚಾರಗಳ ಸಾಕ್ಷಾತ್ಕಾರ) ವನ್ನು ನ.೨೦ರಂದು ಬೆ.11.30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾತಿನಮನೆ ಸಭಾಂಗಣದಲ್ಲಿ ನಡೆಯುವ ಸಮಾನ ಚಿಂತಕರ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿದೆ.

ಲೇಖಕ ರೋಹಿತ್ ಚಕ್ರತೀರ್ಥ ಬಿಡುಗಡೆ ಮಾಡಲಿದ್ದಾರೆ. ಸಂಸ್ಕೃತಿ ಪ್ರತಿಪಾದಕ ವಿದ್ವಾನ್ ನವೀನಶಾಸ್ತ್ರೀ ಪುರಾಣಿಕ ಅವರಿಂದ ಪುಸ್ತಕಾವಲೋಕನ, ಲೇಖಕ ಹನುಮಂತ. ಮ. ದೇಶಕುಲಕರ್ಣಿ, ಸಹನಾ ಪ್ರಕಾಶನದ ಆರ್. ಶ್ರೀನಿವಾಸ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತಿನಮನೆ ಸಂಸ್ಥಾಪಕ ರಾ.ಸು. ವೆಂಕಟೇಶ ವಹಿಸಲಿದ್ದಾರೆ.
ಲೇಖಕರ ಪರಿಚಯ:
ಒಬ್ಬ ಪತ್ರಕರ್ತನಾಗಿ, ಲೇಖಕನಾಗಿ, ಸಂಘಟಕನಾಗಿ , ಕವಿಯಾಗಿ, ವ್ಯಂಗ್ಯ ಚಿತ್ರಕಾರನಾಗಿ ಹೀಗೆ ವಿವಿಧ ಪ್ರಕಾರಗಳಲ್ಲಿ ಹೆಸರು ಮಾಡಿದ ಹನುಮಂತ.ಮ. ದೇಶಕುಲಕರ್ಣಿ ಅವರು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿದ್ದು ಅವುಗಳಲ್ಲಿ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ವಿಷಯಗಳು ತುಂಬಿರುತ್ತವೆ. ಇವರ ಪ್ರಬುದ್ಧ ಲೇಖನಗಳು ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕದಲ್ಲಿ, ಮಾಸ ಪತ್ರಿಕೆಯಲ್ಲಿ 4,000ಕ್ಕೂ ಮಿಕ್ಕಿ ಲೇಖನಗಳು ಪ್ರಕಟವಾಗಿವೆ.

ಚಿಕ್ಕ ವಯಸ್ಸಿನಲ್ಲೇ ವಿವಿಧ ಪತ್ರಿಕೆ ಹಾಗೂ ಮ್ಯಾಗಜೀನ್ ಗಳಿಗೆ ಅಂಕಣಕಾರರಾಗಿಯೂ ತಮ್ಮ ಬರವಣಿಗೆಯ ಗಟ್ಟಿತನದ ಮೂಲಕ ನಾಡಿನ ಜನ ಮೆಚ್ಚುವಂತೆ ಮಾಡಿದ್ದಾರೆ.

ಸಿಗುವ ಅಲ್ಪ ಸಮಯದಲ್ಲಿಯೇ ಸಂಘಟನೆ ಮಾಡಿಕೊಂಡು ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಇವರು ಮಹಾಮಾರಿ ಕೊರಾನಾ ಜಗತ್ತನ್ನು ಆವರಿಸಿದಾಗ ಇಡೀ ದೇಶವೇ ಲಾಕ್ ಡೌನ್ ಆದಾಗ ಎಲ್ಲರಿಗೂ ಓದಲು ಅನುಕೂಲವಾಗಲೆಂದು ಇ- ಬುಕ್ ಪರಿಕಲ್ಪನೆ ಹುಟ್ಟು ಹಾಕಿ ವಾಟ್ಸಾಫ್ ಮೂಲಕ ಪ್ರತಿಯೊಬ್ಬರಿಗೂ ಉಚಿತ ಬುಕ್ ತಲುಪಿಸುವ ಪ್ರಯತ್ನ ಮಾಡಿದರು. ಇದನ್ನು ನಾಡಿನ ಜನ ಬೆಂಬಲಿಸಿ ಪ್ರೋತ್ಸಾಹಿಸಿದರು.
ಎರಡು ಅವಧಿಯ ಲಾಕ್‌ಡೌನ್ ಸಂದರ್ಭದಲ್ಲಿ ಅವರು ಭೋಗೇನಾಗರಕೊಪ್ಪ ಇತಿಹಾಸ (ಗ್ರಾಮಕಥನ), ಅಂಬರಗಾಮಿಯ ಅಮರ ಗೀತೆಗಳು, (ಕವನ ಸಂಕಲನ), ಕವನ ಶ್ರಾವಣ (ಕವನ ಸಂಕಲನ ಸಂಪಾದನಾ ಕೃತಿ), ಬಳ್ಳಿ ಬಳುಕ್ಯಾವೋ, ಪಂಚಸಚಿ (ಲೇಖನ ಸಂಪಾದನಾ ಕೃತಿ), ಸಮಾನ ಚಿಂತಕರು ವಾರ್ಷಿಕೋತ್ಸವ ಸ್ಮರಣ ಸಂಚಿಕೆ ಹೀಗೆ ತಾವು ಹಾಗೂ ಆಸಕ್ತರ ಬರಹ ಸಂಪಾದಿಸಿ ಇ -ಬುಕ್ ತಯಾರಿಸಿ ಹಂಚಿದ್ದು ಶ್ಲಾಘನೀಯ. ಜೊತೆಗೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವೈಭವೀಕರಿಸುವ ಮಾಹಿತಿಪೂರ್ಣ 2021ರ “ಸುವಿಚಾರ ಇ-ದಿನದರ್ಶಿಕೆ” ರಚಿಸಿ ನಾಡಿನ ಜನತೆಗೆ ಉಚಿತವಾಗಿ ವಿತರಿಸಿದರು. ಇವರ ಕನ್ನಡಪರ ಕಾರ್ಯ ಗುರುತಿಸಿದ ಆಕಾಶವಾಣಿ ಧಾರವಾಡವು ‘ಯುವವಾಣಿ’ಯಲ್ಲಿ ವಿಶೇಷ ಸಂದರ್ಶನವನ್ನು ಮಾಡಿತು.

“ಟಾಂಗಣ್ಣ” ಹೆಸರಿನಲ್ಲಿ ಓರೆಕೋರೆಗಳಿಗೆ ಭೂತಗನ್ನಡಿ ಹಿಡಿಯುವ ಹಾಸ್ಯ ಪಾತ್ರವನ್ನು ಸೃಷ್ಟಿಸಿಕೊಂಡು ಹಾಸ್ಯ ಬರಹಗಳನ್ನು ಬರೆಯುತ್ತ ಬಂದಿರುವ ಇವರು ತಿಳಿಹಾಸ್ಯದ ಮೂಲಕ ನಗಿಸುತ್ತಾರೆ. ಅಂಬರಗಾಮಿ’ ಎಂಬ ಕಾವ್ಯನಾಮ ಇಟ್ಟುಕೊಂಡು ನೂರಾರು ಉತ್ತಮ ಕವನಗಳನ್ನು ಬರೆದಿದ್ದಾರೆ. ‘ಪ್ರತ್ಯಗ್ರ’ ಎಂಬ ಪ್ರಣವಾನಂದ ಶ್ರೀಗಳು ನೀಡಿದ ಬಿರುದನ್ನು ಅಂಕಿತವಾಗಿಸಿಕೊಂಡು ಭಾವನೆಗಳ ಕುರಿತು, ಮನಸ್ಸಿಗೆ ನಾಟುವ ಉಕ್ತಿಯನ್ನು ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಒಳಪಟ್ಟಿವೆ.
ವಿವಿಧ ವಿಚಾರ ಹಾಗೂ ವಿಶಿಷ್ಟ ಬರಹಗಳನ್ನು ಓದುಗರಿಗೆ ಮುದ ನೀಡುವ ಬರಹಗಳ ಗುಚ್ಛವಾದ ‘ ಶ್ರೀಕಾರ” ಎಂಬ ಹೆಸರಿನ ಕೃತಿಯು ಬಿಡುಗಡೆಯಾಗಲಿದೆ.

ಓಂಕಾರ, ಶ್ರೀ ಗಣೇಶಾಂಜನೇಯ ಕ್ಷೇತ್ರದರ್ಶನ ಕೃತಿ ಬಿಡುಗಡೆಯಾಗಿವೆ. “ಹನುಮಾಯಣ” , ಅಪ್ರತಿಮ ಶತ ಪ್ರಮೀಳೆಯರು”, ದೇದೀಪ್ಯಮಾನ ಕೃತಿಗಳು ಬಿಡುಗಡೆಯ ಹಂತದಲ್ಲಿವೆ.

ಪುರಸ್ಕಾರಗಳು: ಇವರು ಸಾಂಸ್ಕೃತಿಕ ಲೋಕಕ್ಕೆ ಸಲ್ಲಿಸಿದ ಬರವಣಿಗೆಯನ್ನು ಗಮನಿಸಿದ ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಪ್ರಣವಾನಂದ ತೀರ್ಥ ಮಹಾಸ್ವಾಮಿಗಳು ಕಲಘಟಗಿ ತಾಲೂಕಾ ಬ್ರಾಹ್ಮಣ ಸಂಘದ ಸಹಯೋಗದಲ್ಲಿ 2018ರ ಸಾಲಿನ ದತ್ತ ಜಯಂತಿಯಂದು ಇವರಿಗೆ “ಪ್ರತ್ಯಗ್ರ ಲೇಖಕ” ಎಂಬ ಬಿರುದು ನೀಡಿ ಆಶೀರ್ವದಿಸಿದ್ದಾರೆ.ಅದೇ ರೀತಿ ಕಲಘಟಗಿ ಪಟ್ಟಣದ ವಿದ್ಯಾಸಾಗರ ಸ್ಕೂಲ್‌ನವರು ಮಾಧ್ಯಮಶ್ರೀ ಪ್ರಶಸ್ತಿ ನೀಡಿದ್ದಾರೆ.

ವಿಶ್ವ ಮಾನವ ಹಕ್ಕುಗಳ ಸಂಸ್ಥೆಯ ವಿಶ್ವ ಮಾನವಾಧಿಕಾರ ಪರಿಷತ್ ಲಖನೌ ವತಿಯಿಂದ ‘ಕೊರಾನಾ ವಾರಿಯರ್ಸ್’ ಪುರಸ್ಕಾರ ಲಭಿಸಿದೆ.
ಪ್ರಕಟಣೆ ಹಂತದಲ್ಲಿರುವ ಇವರ “ಹನುಮಾಯಣ” ಕೃತಿಗೆ ಹೆಬ್ಬಳ್ಳಿಯ ಪೂಜ್ಯ ಶ್ರೀ ದತ್ತಾವಧೂತ ಮಹಾರಾಜರು ಕೃತಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಕೃತಿಯಲ್ಲಿನ ಕೆಲ ಅಂಶವನ್ನು ಉಲ್ಲೇಖಿಸಿ ಮೂರು ರಾಜ್ಯಗಳಲ್ಲಿ ಇರುವ ಅವರ ಭಕ್ತರಿಗೆ ಹನುಮಂತನ ಕುರಿತು ಪ್ರವಚನ ನೀಡಿದ್ದು ಉಲ್ಲೇಖನೀಯ. ಅವಧೂತರು ಅನುಗ್ರಹಿಸಿ ಆಶೀರ್ವಚನ ನೀಡಿ ಸನ್ಮಾನಿಸಿದ್ದಾರೆ. ಇವರ ಚೊಚ್ಚಲ ಕೃತಿ “ಓಂಕಾರ”ಕ್ಕೆ ನಾಡಿನ ಓದುಗರ ಅಪಾರ ಮೆಚ್ಚುಗೆಯ ಜೊತೆ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರೋತ್ಸಾಹಧನ ನೀಡಿ ಸನ್ಮಾನಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಬೆಂಗಳೂರು
Share199Tweet123Send
Previous Post

PM attends third ‘No Money for Terror’ Ministerial Conference

Next Post

2023ರ ಚುನಾವಣಾ ಪ್ರಕ್ರಿಯೆ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ: ಡಿಸಿ ಲತಾ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
2023ರ ಚುನಾವಣಾ ಪ್ರಕ್ರಿಯೆ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ: ಡಿಸಿ ಲತಾ

2023ರ ಚುನಾವಣಾ ಪ್ರಕ್ರಿಯೆ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ: ಡಿಸಿ ಲತಾ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಒಂದೇ ವರ್ಷದಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಗಳಿಸಿದ ಆದಾಯವೆಷ್ಟು ಗೊತ್ತಾ?

ಒಂದೇ ವರ್ಷದಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಗಳಿಸಿದ ಆದಾಯವೆಷ್ಟು ಗೊತ್ತಾ?

April 4, 2026
SWR to run special trains for Good Friday, Easter rush

ಗಮನಿಸಿ! ಚಿತ್ರದುರ್ಗ-ಚಿಕ್ಕಜಾಜೂರು ರೈಲುಗಳು ಭಾಗಶಃ ರದ್ದು | ಇಲ್ಲಿದೆ ಡೀಟೇಲ್ಸ್

April 4, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಈ 8 ದಿನ ತಾಳಗುಪ್ಪ-ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ | ಹುಬ್ಬಳ್ಳಿ-ಅರಸೀಕೆರೆ ರೈಲು ರದ್ದು

April 4, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಎಪ್ರಿಲ್ 4ರ ಶನಿವಾರ ಭದ್ರಾವತಿಯ ಹಲವು ಕಡೆ ಕರೆಂಟ್ ಇರಲ್ಲ

April 3, 2026
ಪೊಲೀಸ್ ಪಬ್ಲಿಕ್ ಶಾಲೆ | ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಪೊಲೀಸ್ ಪಬ್ಲಿಕ್ ಶಾಲೆ | ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

April 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL