ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಳೆದ ವಾರ ವಿಧಾನಸೌಧದ ಅವರಣದಲ್ಲಿ ಪಾಕಿಸ್ಥಾನ್ ಜಿಂ… ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತರಾಗಿರುವ ಮೂವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಇದರಲ್ಲೊಬ್ಬ ಲೋಕಸಭಾ ಚುನಾವಣಾ ಆಕಾಂಕ್ಷಿಯೂ ಸಹ ಆಗಿದ್ದಾನೆ ಎಂದು ಹೇಳಲಾಗಿದೆ.
ಮೂಲಗಳ ಮಾಹಿತಿಯಂತೆ, ಬಂಧಿತ ಮೂವರು ಆರೋಪಿಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಇದರಲ್ಲೊಬ್ಬ ಪಾಕಿಸ್ಥಾನ್ ಎಂದು ಕೂಗಿದ್ದು, ಇನ್ನಿಬ್ಬರು ಜಿಂದಾಬಾದ್ ಎಂದು ಕೂಗಿದ್ದಾನೆ ಎಂದು ತಿಳಿದುಬಂದಿದೆ.

Also read: Digitization of Services from “Sakala” Application Receipt-to-Service: Krishna Byregowda Advises
ಓರ್ವ ಎಂಪಿ ಎಲೆಕ್ಷನ್ ಟಿಕೇಟ್ ಆಕಾಂಕ್ಷಿ
ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಮೊಹಮದ್ ನಾಶೀಪುಡಿ ಎಂಬಾತನು ಬ್ಯಾಡಗಿಯ ಶ್ರೀಮಂತ ಮೆಣಸಿನಕಾಯಿ ವ್ಯಾಪಾರಿಯಾಗಿದ್ದಾನೆ. ಹಾವೇರಿ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದಾನೆ ಎನ್ನಲಾಗಿದೆ.

ಆರೋಪಿಗಳನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಮಾರ್ಚ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post