ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತದ ಅಸ್ಮಿತೆಗೆ ಧಕ್ಕೆ ತರುವ ಪಿಎಫ್ಐ ಸಂಚು ಬಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ರಾಮಮಂದಿರ ಸ್ಫೋಟ ಮಾಡುವುದಕ್ಕೆ ಪಿಎಫ್ಐ ಸಂಚು ಮಾಡಿತ್ತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಪಿಎಫ್ಐ ಸಂಘಟನೆ ಒಂದು ದೇಶದ್ರೋಹಿ ಸಂಘಟನೆ. ದೇಶವ್ಯಾಪಿ ವಿಧ್ವಂಸಕ ಹಾಗೂ ಭಯೋತ್ಪಾದನೆ ಕೃತ್ಯಗಳನ್ನು ಮಾಡುತ್ತಿದೆ. ಈ ಹಿಂದೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿದಂತೆ, ಏಕಕಾಲದಲ್ಲಿ ವಿವಿಧ ಕಡೆ ದುಷ್ಕೃತ್ಯಗಳನ್ನು ಮಾಡುವ ಅವರ ಷಡ್ಯಂತ್ರ ಈಗಾಗಲೇ ಬಯಲಾಗಿದೆ. ಭಾರತದ ಅಸ್ಮಿತೆಯನ್ನು ಪ್ರತಿನಿಧಿಸುವಂತಹ ಕಟ್ಟಡಗಳನ್ನು ಧ್ವಂಸ ಮಾಡುವ ಮೂಲಕ ಭಾರತದ ಅಸ್ಮಿತೆಗೆ ಧಕ್ಕೆ ತರುವುದು ಅವರ ಹುನ್ನಾರವಾಗಿದೆ ಎಂದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು











Discussion about this post