ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನ.30ರಂದು ನಡೆಯಲಿರುವ ತೆಲಂಗಾಣ ಚುನಾವಣೆಯ ಪ್ರಚಾರದ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಸ್ಥಾನ ಪಡೆದುಕೊಳ್ಳುವ ಮೂಲಕ ಇಳಿವಯಸ್ಸಿನಲ್ಲೂ ತಮ್ಮ ರಾಜಕೀಯ ಶಕ್ತಿ ಎಂತಹುದ್ದು ಎಂಬುದನ್ನು ಸಾಬೀತು ಮಾಡಿದ್ದಾರೆ.
ತೆಲಂಗಾಣದ ಒಟ್ಟು 119 ಸ್ಥಾನಗಳಿಗೆ ನ.30 ರಂದು ಏಕ-ಹಂತದ ಮತದಾನ ನಡೆಯಲಿದೆ. ಡಿ. 3 ರಂದು ಫಲಿತಾಂಶ ಹೊರಬೀಳಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಮಹತ್ವದ ಜವಾಬ್ದಾರಿ ನೀಡಿರಲಿಲ್ಲ. ಆದರೆ, ತೆಲಂಗಾಣ ಚುನಾವಣೆಯ ಪ್ರಚಾರದ 40 ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಯಡಿಯೂರಪ್ಪ ಸ್ಥಾನ ಪಡೆದುಕೊಂಡಿರುವುದು ರಾಜಾಹುಲಿಯ ಶಕ್ತಿ ಪ್ರದರ್ಶನ ಮತ್ತೊಮ್ಮೆ ಆಗಿದೆ.
Also read: ತಾಯಂದಿರ ಮುತ್ತೈದೆತನಕ್ಕೆ ಕುತ್ತು ತರುವುದೇ ಕರ್ನಾಟಕ ಮಾದರಿಯಾ? ಜೆಡಿಎಸ್ ಕಿಡಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post