ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ Rameshwaram Cafe ನಡೆದ ಬಾಂಬ್ ಸ್ಫೋಟಕ್ಕೆ ಸಂಬAಧಿಸಿದAತೆ ಶಂಕಿತ ಆರೋಪಿಯ ಫೋಟೋವನ್ನು ಎನ್’ಐಎ ಬಿಡುಗಡೆ ಮಾಡಿದ್ದು, ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
NIA announces cash reward of 10 lakh rupees for information about bomber in Rameshwaram Cafe blast case of Bengaluru. Informants identity will be kept confidential. pic.twitter.com/F4kYophJFt
— NIA India (@NIA_India) March 6, 2024
ಈ ಕುರಿತಂತೆ ಎನ್’ಐಎ ಅಧಿಕೃತವಾಗಿ ಫೋಟೋ ಹಾಗೂ ಮಾಹಿತಿ ಬಿಡುಗಡೆ ಮಾಡಿದ್ದು, ಶಂಕಿತ ಆರೋಪಿಯ ಪತ್ತೆಗಾಗಿ ಬಲೆ ಬೀಸಿದೆ.
Also read: Due amount of contractor will be paid in full in phased manner: CM
ಮುಖಕ್ಕೆ ಮಾಸ್ಕ್ ಇಲ್ಲದೇ ಇರುವ ಹತ್ತಿರದ ಫೋಟೋವೊಂದನ್ನು ಎನ್’ಐಎ ಬಿಡುಗಡೆ ಮಾಡಿದ್ದು, ಎನ್’ಐಎ ಅಧಿಕಾರಿಗಳ ತಂಡ ಆರೋಪಿಗಾಗಿ ತೀವ್ರ ಹುಡಕಾಟ ನಡೆಸುತ್ತಿದೆ. ಇದುವರೆಗೂ ಆರೋಪಿ ಹೋಲುವ ಫೋಟೋ ಇರಲಿಲ್ಲ. ಎನ್’ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಚಹರೆ ಪತ್ತೆಯಾಗಿದೆ.
ಆರೋಪಿ ಬಗ್ಗೆ ತಿಳಿದರೆ ಕೂಡಲೇ 080-29510900, 8904241100 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಎನ್’ಐಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ಎನ್’ಐಎ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post