ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಸ್ಫೋಟ ಹೇಗೆ ಸಂಭವಿಸಿದ್ದು ಎನ್ನುವುದನ್ನು ಹೇಳಲು ಇದು ತೀರಾ ಆತುರದ ಸಮಯವಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ Alok Mohan ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿ ಅವರು, ಸ್ಫೋಟಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದೇವೆ. ಬಾಂಬ್ ನಿಷ್ಕಿಯ ದಳ, ಎಫ್’ಎಸ್’ಎಲ್ ತಂಡ ಪರಿಶೀಲನೆ ನಡೆಸುತ್ತಿದೆ. ಪೂರ್ಣ ಮಾಹಿತಿ ಹೊರಬಂದ ನಂತರ ಖಚಿತವಾಗಿ ಹೇಳಲು ಸಾಧ್ಯ ಎಂದರು.
ಐಇಡಿ ಸ್ಪೋಟವೇ ಎನ್ನುವುದನ್ನು ಖಚಿತಪಡಿಸಲು ಇದು ತೀರಾ ಆತುರವಾದ ಸಮಯವಾಗುತ್ತದೆ(ಟೂ ಅರ್ಲಿ). ವರದಿ ಬಂದ ನಂತರ ಮಾಹಿತಿ ನೀಡುತ್ತೇವೆ. ಘಟನೆ ಕುರಿತಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದರು.
Also read: 10 ಸೆಕೆಂಡ್’ನಲ್ಲಿ 2 ಬ್ಲಾಸ್ಟ್ | ಹೊಟೇಲ್ ಛಿದ್ರ, ಮಹಿಳೆ ಕಣ್ಣು, ಹಲವರ ಮೈಗೆ ಗಂಭೀರ ಹಾನಿ
ಇನ್ನು, ಸ್ಫೋಟದ ವಿಚಾರದ ಕುರಿತು ರಾಷ್ಟ್ರೀಯ ತನಿಖಾ ದಳ ಹಾಗೂ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಎನ್’ಐಎ ತಂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















