ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಆರಂಭವಾಗಿದ್ದು, ಜನರು ಮನೆಗಳಿಂದ ಹೊರಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ #Dr. C.N. Manjunath ಕರೆ ನೀಡಿದ್ದಾರೆ.
ತಮ್ಮ ಬಡಾವಣೆಯ ಮತಗಟ್ಟೆ ಸಂಖ್ಯೆ 179ರಲ್ಲಿ ಕುಟುಂಬ ಸಹಿತ ಮತದಾನ ಮಾಡಿದ ನಂತರ ಅವರು ಮಾತನಾಡಿದರು.
ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದ್ದು, ಪ್ರತಿಯೊಬ್ಬರೂ ಕುಟುಂಬ ಸಮೇತ ಬಂದು ಮತ ಹಾಕಬೇಕು. ನಿಮ್ಮ ಎಲ್ಲ ಕೆಲಸಗಳನ್ನೂ ಬದಿಗಿಟ್ಟು ಮತದಾನ ಮಾಡಲು ಬನ್ನಿ ಎಂದು ಕರೆ ನೀಡಿದರು.
Also read: ನಿಮ್ಮ ನಾಯಕನನ್ನು ಆರಿಸಿಕೊಳ್ಳುವ ಸುವರ್ಣಾವಕಾಶ, ತಪ್ಪದೇ ಮತದಾನ ಮಾಡಿ: ನಟ ಅನಿರುದ್ ಕರೆ
ಎಲ್ಲ ದಾನಕ್ಕಿಂತಲೂ ಮತದಾನ ಪ್ರಾಮುಖ್ಯವಾದದ್ದು. ನಮಗೆ ಬೇಕಾದ ಅಭ್ಯರ್ಥಿಗೆ ಮತ ನೀಡಲು ಇದೊಂದು ಸುವರ್ಣಾವಕಾಶ. ರಜೆ ನೀಡಿದ್ದಾರೆ ಎಂದು ಎಲ್ಲೂ ಹೋಗಬೇಡಿ. ಮೊದಲ ಬಾರಿಗೆ ಮತದಾನ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಎಂದರು.
ವೋಟ್ ಹಾಕದಿದ್ದರೆ ಟೀಕಿಸುವ ಹಕ್ಕು ಇರಲ್ಲ
ಚುನಾವಣೆಯಲ್ಲಿ ಯಾರು ಮತದಾನ ಮಾಡುವುದಿಲ್ಲವೇ ಅಂತಹವರಿಗೆ ವ್ಯವಸ್ಥೆಯ ಬಗ್ಗೆ ಟೀಕಿಸುವ ನೈತಕತೆ ಹಾಗೂ ಹಕ್ಕೂ ಸಹ ಇರುವುದಿಲ್ಲ ಎಂದರು.
ಮತದಾನ ಎನ್ನುವುದು ರಕ್ತದಾನ ಸೇರಿದಂತೆ ಎಲ್ಲ ದಾನಗಳಿಗಿಂತಲೂ ಪವಿತ್ರವಾದುದು. ಹೀಗಾಗಿ, ಸಂಜೆಯವರೆಗೂ ಸಮಯವಿದ್ದು, ಪ್ರತಿಯೊಬ್ಬರೂ ಮತದಾನ ಮಾಡಿ ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post