ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ #Renukaswamy ಎಂಬ ವ್ಯಕ್ತಿಯ ಹಲ್ಲೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ #Actor Darshan ಹಾಗೂ ಪವಿತ್ರಾ ಗೌಡ #Pavithra Gowda ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಬಂಧನವಾಗಿದ್ದು, ಈ ವಿಚಾರ ಸ್ಯಾಂಡಲ್’ವುಡ್’ನಲ್ಲಿ #Sandalwood ಬಿರುಗಾಳಿಯನ್ನು ಎಬ್ಬಿಸಿದೆ.
ಕಳೆದ ಭಾನುವಾರ ಕಾಮಾಕ್ಷಿಪಾಳ್ಯದ ನಾಲೆ ಬಳಿಯಲ್ಲಿ ಪತ್ತೆಯಾಗಿದ್ದ ರೇಣುಕಾಸ್ವಾಮಿ ಎನ್ನುವವರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಶಾಕಿಂಗ್ ವಿಚಾರಗಳು ಹೊರಬಿದ್ದಿವೆ ಎಂದು ಹೇಳಲಾಗಿದೆ.
ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬಹಿರಂಗವಾಗಬೇಕಿದ್ದು, ರೇಣುಕಾಸ್ವಾಮಿಯ ಮೃತದೇಹದ ಮೇಲೆ ತೀವ್ರತರವಾಗಿ ಹಲ್ಲೆ ಮಾಡಿದ ಹಾಗೂ ಸಿಗರೇಟಿನಿಂದ ಸುಟ್ಟ ಗಾಯಗಳು ಪತ್ತೆಯಾಗಿದ್ದು, ಭಾರೀ ಕ್ರೌರ್ಯ ಎಸಗಲಾಗಿದೆ ಎಂದು ವರದಿಯಾಗಿದೆ.
Also read: ಕೊಲೆ ಪ್ರಕರಣ | ನಟ ದರ್ಶನ್ ಬಂಧನ ಬೆನ್ನಲ್ಲೇ ಪವಿತ್ರಾ ಗೌಡ ಸಹ ಪೊಲೀಸ್ ಅರೆಸ್ಟ್
ಚಿತ್ರ ಹಿಂಸೆ ನೀಡಿ ಹಲ್ಲೆ
ಇನ್ನು, ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರು ಎಂಬ ಕಾರಣಕ್ಕಾಗಿ ರೇಣುಕಾಸ್ವಾಮಿ ಅವರನ್ನು ಕರೆಸಿಕೊಂಡು, ಆನಂತರ ಅಹಪರಣ ಮಾಡಲಾಗಿದೆ. ಅಲ್ಲಿಂದ ದರ್ಶನ್ ಆಪ್ತರಾದ ವಿನಯ್ ಎನ್ನುವವರು ಶೆಡ್’ಗೆ ಕರೆದುಕೊಂಡು ಹೋಗಿ ಅವರ ಮೇಲೆ ಭಾರೀ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ರೇಣುಕಾಸ್ವಾಮಿಯವರ ಶವದ ಮೇಲೆ ಅತೀವವವಾದ ಕ್ರೌರ್ಯ ಮರೆದಿರುವುದು ಪತ್ತೆಯಾಗಿದ್ದು, ದವಡೆ ಕಿತ್ತು ಬಂದಿದೆ, ಕೈ ಹಾಕು ಕಾಲಿನ ಮೇಲೆ ಸಿಗರೇಟಿನಿಂದ ಸುಟ್ಟ ಗಾಯಗಳು ಕಂಡುಬಂದಿದೆ. ಅಲ್ಲದೇ, ಶವದ ಬೆನ್ನು ಮೂಲೆ ಸೇರಿದಂತೆ ದೇಹದ ತುಂಬೆಲ್ಲಾ ದೊಡ್ಡ ಪ್ರಮಾಣದ ಗಾಯಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಇನ್ನು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಅಧಿಕೃತ ವರದಿ ಇನ್ನೂ ಹೊರಬೀಳಬೇಕಿದೆ. ಅಲ್ಲದೇ, ತನಿಖಾಧಿಕಾರಿಗಳೂ ಸಹ ಮರಣೋತ್ತರ ಪರೀಕ್ಷಾ ವರದಿಯ ಕುರಿತಾಗಿ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ದರ್ಶನ್ ವಶಕ್ಕೆ, ವಿಚಾರಣೆ
ಇನ್ನು, ಮೃತ ರೇಣುಕಾಸ್ವಾಮಿ ಮೊಬೈಲ್ ಕರೆಗಳು ಹಾಗೂ ಮೃತದೇಹ ಪತ್ತೆಯಾದ ಕಾಮಾಕ್ಷಿಪಾಳ್ಯ, ಹಲ್ಲೆ ನಡೆಸಲಾಗಿದೆ ಎನ್ನಲಾದ ರಾಜರಾಜೇಶ್ವರಿ ನಗರದ ವಿನಯ್ ಎನ್ನುವವರ ಕಾರ್ ಶೆಡ್ ಬಳಿಯ ಹಾಗೂ ಈ ನಡುವಿನ ಮಾರ್ಗದ ಎಲ್ಲ ರೂಟ್ ಮ್ಯಾಪ್ ರೀತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಮೊಬೈಲ್ ಕರೆಗಳ ವಿವರ, ತಾಂತ್ರಿಕ ಅಂಶಗಳು ಹಾಗೂ ಪ್ರಾಥಮಿಕ ತನಿಖೆಯ ಆಧಾರದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ದರ್ಶನ್ ಅವರ ಪ್ರತ್ಯಕ್ಷ ಹಾಗೂ ಪರೋಕ್ಷ ಪಾತ್ರವಿದೆಯೇ ಎಂಬ ಕುರಿತಾಗಿ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post