ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ವಿಷಯ ಪ್ರಸ್ತಾಪಿಸಿ ನೋಟರಿಗಳ ನೇಮಕಾತಿಯಲ್ಲಿ ನಿರ್ದಿಷ್ಟ ವರ್ಗಗಳ ಆಯ್ಕೆ ಕುರಿತಾಗಿ ಅವರು ಪ್ರಶ್ನೆ ಕೇಳಿ ಸದಸ್ಯರನ್ನು ಆಲೋಚನೆಗೆ ಪ್ರೇರೇಪಿಸಿತು.
ಕಳೆದ ವರ್ಷಗಳಿಂದ ಆಯ್ಕೆಯಾದ ನೋಟರಿಗಳ ಪೈಕಿ ಅನೇಕ ವರ್ಗಗಳು, ಜಾತಿಗಳು ಮತ್ತು ಧರ್ಮಗಳ ಪ್ರತಿನಿಧಿಗಳ ಸಂಖ್ಯೆಯ ಕುರಿತು ಮಾಹಿತಿ ಕೇಳಿದರು ಮತ್ತು ಈ ನೇಮಕಾತಿಗೆ ಅನುಸರಿಸಲಾಗುವ ನಿಯಮಗಳನ್ನು ತಿಳಿದುಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಕ್ಯಾಬಿನೇಟ್ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ನೋಟರಿ ಯಾವುದೇ ಸರ್ಕಾರಿ ಹುದ್ದೆಯಾಗಿಲ್ಲ ಎಂದು ತಿಳಿಸಿ ಇದು. , ವಕೀಲರಿಗೆ ಸರ್ಕಾರಿ ಮಾನ್ಯತೆ ನೀಡಲಾಗುತ್ತಿದ್ದು, ಅವರಿಗೆ ಸರಕಾರದಿಂದ ವೇತನ ನೀಡಲಾಗುವುದಿಲ್ಲ. ನೋಟರಿಗಳ ಅನುಮೋದನೆಗಾಗಿ ಕೇಂದ್ರ ಸರ್ಕಾರದ ಪ್ರಕಾರ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ. ರಾಜ್ಯ ಸರ್ಕಾರವು ಕೇವಲ ಅರ್ಹತಾ ಮಾನದಂಡಗಳ ಆಧಾರದ ಮೇಲೆ ನೋಟರಿಗಳನ್ನು ಅನುಮೋದಿಸುತ್ತದೆ ಎಂದು ಹೇಳಿದರು.
ಇನ್ನು ಕೆಲವರು ತಮ್ಮ ಅಧಿಕಾರವನ್ನು ಮೀರಿಸಿ ಕಾನೂನನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ, ಈ ಸಂಬಂಧ ಸರ್ಕಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿ ರಾಜ್ಯ ಸರ್ಕಾರದ ಅಧಿಕಾರದಡಿ ನೋಟರಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಶಿಫಾರಸು ಮಾಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಚಿವರ ಉತ್ತರಕ್ಕೆ ಪ್ರತಿಸ್ಪಂದನೆ ನೀಡಿದ ಎಂಎಲ್‍ಸಿ ಬಲ್ಕಿಸ್ ಬಾನು, ನೋಟರಿಗಳ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳಿದ್ದರೆ, ಸಂವಿಧಾನದ ಪ್ರಕಾರ ಅವರಿಗೆ ಮೀಸಲಾತಿ ಏಕೆ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆ ಎತ್ತಿದರು. ಮೀಸಲಾತಿಯ ಕೊರತೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ನೋಟರಿ ಅಧಿಕಾರ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸಚಿವರು ಗಂಭೀರವಾಗಿ ಚಿಂತನೆ ಮಾಡುತ್ತೇವೆ ಮತ್ತು ನೋಟರಿ ನೇಮಕಾತಿಯಲ್ಲಿ ಮೀಸಲಾತಿ ನೀಡಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಪರಿಶೀಲಿಸಿ ಅಳವಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post