ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಅಶೋಕ್ ರಾವ್ ಇಂದು ವಿಧಿವಶರಾಗಿದ್ದಾರೆ.
ಕ್ಯಾನ್ಸರ್’ನಿಂದ ಬಳಲುತ್ತಿದ್ದ ಇವರಿಗೆ ಕಳೆದ 15 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. ಕನ್ನಡದ ನೂರಾರು ಚಿತ್ರಗಳಲ್ಲಿ ನಟಿಸಿದ್ದ ಅಶೋಕ್ ರಾವ್ ಅವರನ್ನು, ಸ್ವತಃ ಡಾ.ರಾಜಕುಮಾರ್ ಅವರೇ ಆಹ್ವಾನಿಸಿ ಪರಶುರಾಮ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದರು. ತಮ್ಮ ಕಂಚಿನ ಕಂಠ ಹಾಗೂ ವಿಭಿನ್ನ ಡೈಲಾಗ್ ಡೆಲಿವರಿಯಿಂದಲೇ ಚಿತ್ರರಂಗದಲ್ಲಿ ಇವರು ಖ್ಯಾತರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post