ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಂದ್ರಯಾನ-3 Chandrayaana-3 ಮೂಲಕ ಜಾಗತಿಕ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವ ಇಸ್ರೋದ ವಿಜ್ಞಾನಿಗಳಿಗೆ ಶ್ರೀ ಸೋಸಲೆ ವ್ಯಾಸರಾಜ ಮಠದ Vyasaraja Mutt ಪಿಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥರು ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನ ಗಾಂಧಿ ಬಜಾರ್ ನ ಬೆಣ್ಣೆ ಗೋವಿಂದಪ್ಪ ರಸ್ತೆಯ ಶ್ರೀ ವಿದ್ಯಾಪಯೋನಿಧಿ ಸಭಾಮಂದಿರದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನಕ್ಕೂ ತತ್ವ ಜ್ಞಾನಕ್ಕೂ ನಿಕಟ ಸಂಬಂಧವಿದೆ ಅದನ್ನು ತಿಳಿಯಲು ಜ್ಞಾನಿಗಳಿಂದ ಮಾತ್ರ ಸಾಧ್ಯ. ಇಸ್ರೋ ವಿಜ್ಞಾನಿಗಳು ದೇಶವೇ ಹೆಮ್ಮೆಪಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿಗಳಾದ ಇಸ್ರೋ ನಿರ್ದೇಶಕ ಬಿ. ಎನ್. ರಾಮಕೃಷ್ಣ ,ಬಿ.ಎಸ್. ಕಿರಣ್, ಎಂ. ಆರ್. ರಾಘವೇಂದ್ರ , ನಂದಿನಿ ಹರಿನಾಥ್, ಸುಧೀಂದ್ರ ಬಿಂಡಗಿ, ಮಧುಸೂದನ ವೈ. ಎಲ್. ಶ್ರೀನಿಧಿ ಎಂಎಸ್, ದ್ವಾರಕನಾಥ್, ಸುಕನ್ಯಾ ಮೂರ್ತಿ, ವೀಣಾ ರಾಮಪ್ರಸಾದ್, ಜೈಲಕ್ಷ್ಮಿ ಚಂದ್ರಶೇಖರ್ ರವರುಗಳನ್ನು ಶ್ರೀಗಳು ರಜತ ಫಲಕ, ಶಾಲು, ಅಭಿನಂದನಾ ಪತ್ರ ನೀಡಿ ಸತ್ಕರಿಸಿದರು.
Also read: ಸಂಸದ ರಾಘವೇಂದ್ರ ಅವರ ಕಾರ್ಯಬದ್ಧತೆಗೆ ವಿಮಾನ ನಿಲ್ದಾಣ ಸಾಕ್ಷಿ: ಶಾಸಕ ಡಿ.ಎಸ್. ಅರುಣ್ ಬಣ್ಣನೆ
ಪ್ರೊ ಕೆ. ಜೆ ರಾವ್ ಪ್ರಾಸ್ತಾವಿಕ ನುಡಿಗಳನಾಡಿದರು. ನಿವೃತ್ತ ಹಿರಿಯ ಅಧಿಕಾರಿ ಕೆ. ಜಯರಾಜ್ ಮತ್ತು ಮುದ್ದು ಮೋಹನ್, ಹಿರಿಯ ಪತ್ರಕರ್ತ ಎಸ್. ಕೆ. ಶೇಷ ಚಂದ್ರಿಕಾ, ನಿವೃತ್ತ ಎಜಿಡಿಪಿ ಭಾಸ್ಕರ ರಾವ್, ಕ್ಯಾಪ್ಟನ್ ರಾಜಾರಾವ್, ನ್ಯಾಯಮೂರ್ತಿ ಸುಧೀಂದ್ರರಾವ್, ಎಸ್ಪಿಬಿಸಿ ನಿರ್ದೇಶಕ ಡಿ. ಪಿ. ಅನಂತ , ಮೈಸೂರಿನ ಪ್ರಾಚ್ಯ ಸಂಶೋಧನಾ ನಿರ್ದೇಶಕ ಡಿ. ಪಿ. ಮಧುಸೂದನ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















