ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭಿವೃದ್ಧಿಯ ಹರಿಕಾರ, ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರ ಕಾರ್ಯಬದ್ಧತೆಗೆ ಈಗ ಸಾಕಾರಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣವೇ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ DS Arun ಬಣ್ಣಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿವಮೊಗ್ಗ ಹೊರಭಾಗದಲ್ಲಿ ಕಂಗೊಳಿಸುತ್ತಿರುವ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣಿಕರ್ತರಾದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಾಗೂ ಸಂಸದರಾದ ಬಿ. ವೈ. ರಾಘವೇಂದ್ರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
2008ರಿಂದ ಸತತ ಪ್ರಯತ್ನದ ನಂತರ ನಾನಾ ಕಾರಣಗಳಿಂದ ನಿಂತಿತ್ತು. ಬಿ. ವೈ ರಾಘವೇಂದ್ರ ಅವರ ಕಾರ್ಯಬದ್ಧತೆ , ಕಾಲಕಾಲಕ್ಕೆ ಅಧಿಕಾರಿಗಳೊಂದಿಗೆ ಸಂಪರ್ಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಮಾನಯಾನ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ, ಗೊಂದಲ ಗೂಡಾಗಿದ್ದ ಭೂಮಿಯ ಸಮಸ್ಯೆಗಳ ಬಗ್ಗೆ ಪರಿಹರಿಸಿ, ರೈತರಿಗೆ ಜಮೀನಿನ ಹಕ್ಕಿನ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಉಡಾನ್ ಯೋಜನೆ ಅಡಿಯಲ್ಲಿ ಸಾಮನ್ಯ ನಾಗರಿಕರಿಗೂ ಅನುಕೂಲ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
Also read: ಬಿಎಂಟಿಸಿ ಡಿಪೋ 4ರ ಸಿಬ್ಬಂದಿಗೆ ಬಿಗ್ ಶಾಕ್! ಸಪ್ರೈಸ್ ವಿಸಿಟ್ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್
ಸಾರ್ವಜನಿಕರ ಗಮನಕ್ಕೆ
ಉದಾಹರಣೆ :
ಶಿವಮೊಗ್ಗ – ಅಹಮದಾಬಾದ್ – 5,490 ರೂ
ಬೆಂಗಳೂರು – ಅಹಮದಾಬಾದ್ 5571 ರೂ
ಶಿವಮೊಗ್ಗ – ಜಯಪುರ 6477 ರೂ
ಬೆಂಗಳೂರು – ಜಯಪುರ 6866 ರೂ
ಇದೇ ರೀತಿ ಶಿವಮೊಗ್ಗದಿಂದ ಹೊರ ರಾಜ್ಯಗಳಾದ ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ ಹೋಗುವ ವಿಮಾನದ ದರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದ ಆ ಸ್ಥಳಗಳಿಗೆ ಹೋಗುವ ದರಕ್ಕಿಂತ ಕಡಿಮೆ ಆಗಿದೆ. ಸಮಯ ಸಹ ಕಡಿಮೆ ಆಗುತ್ತದೆ. ಇದಕ್ಕೆ ಕಾರಣಕರ್ತರಾದ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಹೃದಯಪೂರ್ವಕ ಅಭಿನಂದಿಸುತ್ತೇನೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















