ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಹೂವುಗಳು, ಅದು ಈ ಜಗತ್ತನ್ನು ಸುಂದರವಾದ ಉದ್ಯಾನವನ್ನಾಗಿ ಮಾಡುತ್ತದೆ ಎಂದು ಸಂವಹನ ಮತ್ತು ಭಾವನಾತ್ಮಕವಾಗಿ ಹಿಂದುಳಿದ ಮಕ್ಕಳ ಶಾಲೆಯ ಸಂಸ್ಥಾಪಕ ಹಾಗು ನಿರ್ದೇಶಕ ವಿನೋದ್ ಕುಮಾರ್ ಬೇಲಿ ಅಭಿಪ್ರಾಯಪಟ್ಟರು.
ಅನಗರದ ಬನಶಂಕರಿ 3ನೇ ಹಂತದ ಕತ್ರಿಗುಪ್ಪೆಯ ಸಮೀಪ ಇರುವ ಆರೋಹಿ ಶಿಕ್ಷಣ ಸಂಸ್ಥೆ ಮತ್ತು ಚಾರಿಟೇಬಲ್ ಟ್ರಸ್ಟ್ ನ ಲಿಟಲ್ ಸ್ಟೆಪ್ಸ ಶಾಲೆಯ ASD (Autism Spectrum disorder) ಸಂವಹನ ಮತ್ತು ಭಾವನಾತ್ಮಕವಾಗಿ ಹಿಂದುಳಿದ ಮಕ್ಕಳ ಜೊತೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಾಗೂ ಅಕಾಲಿಕ ನಿಧನ ಹೊಂದಿದ ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕರುನಾಡಿನ ಮನೆ ಮಗ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ 4 ದಿನಗಳೇ ಕಳೆದಿವೆ. ಆದರೂ ಅಪ್ಪು ಅವರು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆ ದುಃಖದಲ್ಲೇ ಕುಟುಂಬಸ್ಥರು ಇದ್ದಾರೆ. ಹಾಗು ಅಭಿಮಾನಿಗಳಾದ ನಾವು – ಇಡೀ ಭಾರತೀಯ ಚಿತ್ರರಂಗಕ್ಕೆ ಅವರ ನಿಧನದಿಂದ ದೊಡ್ಡ ನಷ್ಟ ಉಂಟಾಗಿದೆ. ಅವರ ಒಳ್ಳೆಯತನ, ಉತ್ತಮ ಕೆಲಸಗಳು ಯಾವಾಗಲೂ ಶಾಶ್ವತವಾಗಿ ನೆನಪಿನಲ್ಲಿ ಇರುತ್ತವೆ. ಸಮಾಜ ಸೇವೆ ಮಾಡುವ ಬಯಸುವವರಿಗೆ ಪುನೀತ್ ರಾಜ್‌ಕುಮಾರ್ ಮಾದರಿಯಾಗಿದ್ದಾರೆ. ಅವರ ಅಗಲಿಕೆಯ ನೋವಿನಲ್ಲಿ ನಾವು ಇಂದು ಸರಳವಾಗಿ 66 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಆರೋಹಿ ಶಿಕ್ಷಣ ಸಂಸ್ಥೆ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯ ದಲ್ಲಿ ಲಿಟಲ್ ಸ್ಟೆಪ್ಸ್ ಶಾಲೆ ಆರಂಭವಾಗಿ 6 ತಿಂಗಳು ಕಳೆದಿದೆ. ಸಂವಹನ ಮತ್ತು ಭಾವನಾತ್ಮಕವಾಗಿ ಹಿಂದುಳಿದ ಮಕ್ಕಳ ಜೊತೆ ಇಂದು ಪ್ರಥಮ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ನುಡಿದರು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಚಿಣ್ಣರು, ಬಾವುಟ ಹಿಡಿದು ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಹಾಡಿಗೆ ಸಂತಸದಿಂದ ಹೆಜ್ಜೆ ಹಾಕಿದರು.
ಈ ವೇಳೆ ಶಾಲೆಯ ಮಕ್ಕಳು ಹಾಗೂ ವಿಶೇಷ ಶಿಕ್ಷಕರಾದ ಪಿ. ರವಣಪ್ಪ, (M.Sc , B.Ed) ಶಿಕ್ಷಕಿ ಮಾಧುರಿ, ಬಿಂದುಶ್ರೀ ಹಾಗೂ ಮಕ್ಕಳಾದ ಅನುರಾಗ್, ಅಗಸ್ತ್ಯ ಹಾಗೂ ಗೀತಾ ಬೇಲಿ ಹಾಗೂ ಆರೋಹಿ ಬೇಲಿ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ವಿಶೇಷತೆ:
ಇಲ್ಲಿ ಮಾತಿನ ತರಬೇತಿ (Speech therapy) , ABT (Art BasedTherapy) ,ABA (Applied Behaviour Analysis ) OT (Occupational Therapy ) ಮತ್ತು Auti spark ಎಂಬ Application ಮೂಲಕ ಮಕ್ಕಳಿಗೆ ವಿಶೇಷ ತರಗತಿಗಳು ಆನ್ ಲೈನ್ ನಲ್ಲಿ ನಡೆಸಲಾಗುತ್ತದೆ.
ತಿಂಗಳಿಗೊಮ್ಮೆ ಸಮಾಲೋಚನೆ:
ಮಕ್ಕಳ ಬಗ್ಗೆ ಪೋಷಕರ ಜೊತೆ ತಿಂಗಳಿಗೊಮ್ಮೆ ಸಮಾಲೋಚನೆ ನಡೆಸಲಾಗುತ್ತದೆ. ಅಂತರ್ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ( OPT ,ILS,VR Head Set ) ಬಳಸಲಾಗುತ್ತದೆ. ಶಾಲೆಯಲ್ಲಿ ಸಂವಹನ ಮತ್ತು ಭಾವನಾತ್ಮಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ಶಿಕ್ಷಣ ತಜ್ಞರಿಂದ ಮತ್ತು ನುರಿತ ತರೆಬೇತುದಾರರು ಮಕ್ಕಳ ಬಾಳಿಗೆ ದೀಪ ಹಚ್ಚುವ ಕಾಯಕ ಮಾಡುತ್ತಿದ್ದಾರೆ.
ಶಾಲೆ ಇರುವುದು ಎಲ್ಲಿ? ಸಂಸ್ಥೆಯ ಬಗ್ಗೆ:
ಬನಶಂಕರಿ 3ನೇ ಹಂತದ ಔಟರ್ ರಿಂಗ್ ರಸ್ತೆಯ ಸಮೀಪದಲ್ಲಿ ಇದ್ದು, ಮೈಸೂರು ನರಸಿಂಹಸ್ವಾಮಿ ಉದ್ಯಾನವನ ಹಾಗೂ ಕತ್ರಿಗುಪ್ಪೆಯ ವಾಟರ್ ಟ್ಯಾಂಕ್ ( #298,2nd FLOOR, 3rd Main Rd, 2nd Block) ಬಳಿ ಇದೆ.
ಆರೋಹಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನಿಂದ “ನಾವು ಕುಟುಂಬಗಳಿಗೆ ABA ಜೀವನಶೈಲಿಯ ಮೇಲೆ ಕೇಂದ್ರೀಕರಿಸುತ್ತೇವೆ ಏಕೆಂದರೆ ಆರೋಹಿ ಶಿಕ್ಷಣ ಮತ್ತು ಸ್ವಲೀನತೆಗಾಗಿ ಚಾರಿಟಬಲ್‌ನಲ್ಲಿ ನೀವು ಕಲಿಯುವುದನ್ನು ನಿಮ್ಮ ಮಗುವಿಗೆ ಸಾಧ್ಯವಾದಷ್ಟು ಉತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಮನೆಯಲ್ಲಿ ಅಳವಡಿಸಬೇಕು ಎಂದು ನಾವು ಭಾವಿಸುತ್ತೇವೆ. ABA ಥೆರಪಿಸ್ಟ್ CBT ಥೆರಪಿಸ್ಟ್ ವಿಶೇಷ ಚಿಕಿತ್ಸಕ ಆರ್ಟ್ ಥೆರಪಿಸ್ಟ್ ವಿಶೇಷ ಶಿಕ್ಷಕ ಸಮಯ ವಿಶೇಷ ಶಾಲೆ ಕ್ಲೌಡ್ ಕ್ಯಾಮೆರಾದೊಂದಿಗೆ ಪೋಷಕರಿಗೆ ಸಕ್ರಿಯಗೊಳಿಸಲಾಗಿದೆ ಮತ್ತು ಶಾಲೆ ಆರಂಭವಾಗಿ 6 ತಿಂಗಳು ಕಳೆದಿದ್ದು ಈ ಶಾಲೆಯಲ್ಲಿ 7 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ವಿನೋದ್ ಬೇಲಿ.
ಮೌಲ್ಯ ಮಾಪನ:
ಮಕ್ಕಳ ಅಭಿವೃದ್ಧಿ ಯ ಮೌಲ್ಯ ಮಾಪನ ವನ್ನು ವಾರಕೊಮ್ಮೆ ಮಾಡುತ್ತೇವೆ ಎನ್ನುತ್ತಾರೆ ಶಾಲೆಯ ವಿಶೇಷ ಶಿಕ್ಷಕರಾದ ಪಿ. ರವಣಪ್ಪ.
ಉದ್ದೇಶ:
ಮಗು ಎಷ್ಟು ನಿಧಾನವಾಗಿ ಕಲಿಯುತ್ತದೆ ಎಂಬುದು ಮುಖ್ಯವಲ್ಲ. ಯಾವತ್ತೂ ಪ್ರಯತ್ನಿಸುವುದನ್ನು ನಿಲ್ಲಿಸದಂತೆ ನಾವು ಅವರನ್ನು ಪ್ರೋತ್ಸಾಹಿಸುವುದು ಮುಖ್ಯವಾದುದು. ಸಂವಹನ ಮತ್ತು ಭಾವನಾತ್ಮಕವಾಗಿ ಹಿಂದುಳಿದ ಮಕ್ಕಳ ಬಾಳಿಗೆ ಬೆಳಕು ಚೆಲ್ಲುವ ಮೂಲಕ ಮುಖ್ಯ ವಾಹಿನಿಗೆ ತರಬೇಕು ಎನ್ನುವುದು ಸಂಸ್ಥೆಯ ಪ್ರಮುಖ ಉದ್ದೇಶ ಎಂದರು.
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಪ್ರತಿ ಮಕ್ಕಳ ಪ್ರತಿ ಕ್ಷಣದ ಮಾಹಿತಿಯನ್ನು ಪೋಷಕರು ಅವರ ಮನೆಯಿಂದಲೇ ನೋಡುವಂತೆ Cloud ಕ್ಯಾಮೆರಾ ಅಳವಡಿಸಿದ್ದೇವೆ ಹಾಗೂ ಪೋಷಕರು ಗಮನಿಸಲು ಅವರಿಗೆ ತಿಳಿಸುತ್ತೇವೆ. ಸದಾ ಕಾಲ ಮಕ್ಕಳ ಸಂವಹನ ಮತ್ತು ಭಾವನಾತ್ಮಕವಾಗಿ ಅಭಿವೃದ್ಧಿ ಪಡೆಯುವ ಸಲುವಾಗಿ ವಾರಕೊಮ್ಮೆ Target ವಿಡಿಯೋ ಮಾಡಿ ಟ್ಯೂಬ್ ಚಾನಲ್ ಮೂಲಕ ಪೋಷಕರು ನೋಡಲು ವ್ಯವಸ್ಥೆ ನೀಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ವಿನೋದ್ ಬೇಲಿ ಹೇಳಿದರು.
ಸಂದರ್ಶನ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post