ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೊಂದಲಕ್ಕೀಡಾದ ಲೋಕಸೇವಾ ಆಯೋಗದ ಪರೀಕ್ಷಾ ವೇಳಾ ಪಟ್ಟಿಯನ್ನು ತಕ್ಷಣ ಬದಲಿಸುವಂತೆ ವಿಧಾನ ಪರಿಷತ್ ಅಧಿವೇಶನದಲ್ಲಿ ಶಾಸಕ ಡಾ. ಧನಂಜಯ ಸರ್ಜಿ #MLA Dr. Dhananjaya Sarji ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕೆಪಿಎಸ್ ಸಿ ಪರೀಕ್ಷಾ ದಿನಾಂಕವನ್ನು ಬದಲಿಸಿ ಶನಿವಾರ ಆದೇಶ ಹೊರಡಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಡಿಸಲಾಗಿದ್ದ ವಿವಿಧ ಲಾಖೆಗಳಲ್ಲಿನ NON HK ವೃಂದದ 227 ಗ್ರೂಪ್ ಬಿ.ಹುದ್ದೆಗಳಿಗೆ ಆಗಸ್ಟ್ 11 ರಂದು ಹಾಗೂ HK ವೃಂದದ 50 ಗ್ರೂಪ್ ಬಿ.ಉದ್ದೆಗಳಿಗೆ 2024 ಆಗಸ್ಟ್ 25 ರಂದು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಇದೀಗ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಲಿಖಿತ ಪರೀಕ್ಷೆಯನ್ನು ಮುಂದೂಡಿ 2024 ಸೆಪ್ಟೆಂಬರ್ 14 ಮತ್ತು 15 ರಂದು ಹಾಗೂ ಅಕ್ಟೋಬರ್ 19 ಮತ್ತು 20 ರಂದು ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ.

Also read: ಶಿರಾಡಿ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ | ಇಲ್ಲಿವೆ ಪರ್ಯಾಯ ಮಾರ್ಗಗಳು
ಸರ್ಕಾರವು ದಿನಾಂಕ 11-08-2024ಕ್ಕೆ ನಿಗದಿಪಡಿಸಿದ್ದ ಪರೀಕ್ಷೆಯನ್ನು ಮುಂದೂಡಿದ್ದು,ಪದವೀಧರರ ಪರವಾಗಿ ತಮ್ಮ ಮನವಿಗೆ ಸ್ಪಂದಿಸಿದಕ್ಕೆ ಡಾ. ಧನಂಜಯ ಸರ್ಜಿ ಅವರು ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Discussion about this post