ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನನಗೆ ಕರುನಾಡಿನ ಜನರು ಆಣೆ ಮಾಡಿ! ನನ್ನ ತಮ್ಮನನ್ನು ಚೆನ್ನಾಗಿ ಕಳುಹಿಸಿಕೊಡೋಣ, ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂದು ನಟ ರಾಘವೇಂದ್ರ ರಾಜಕುಮಾರ್ ಮನವಿ ಮಾಡಿದ್ದಾರೆ.
ಪುನೀತ್ ನಿವಾಸದ ಮುಂದೆ ಮಾತನಾಡಿದ ಅವರು, ನನ್ನ ತಂದೆಯವರನ್ನು ಕಳೆದುಕೊಂಡ ವೇಳೆ ಆದಂತಹ ತೊಂದರೆಗಳು ಈಗ ಆಗಬಾರದು. ಹೀಗಾಗಿ, ಅವನನ್ನು ಚೆನ್ನಾಗಿ ಕಳುಹಿಸಿಕೊಡೋಣ. ಸಾರ್ವಜನಿಕರ ಸಂಯಮ ಕಳೆದುಕೊಳ್ಳದೇ ಸಹಕಾರ ನೀಡಬೇಕು ಎಂದರು.
ಅವನನ್ನು ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ:
ನನಗೆ ಅನಾರೋಗ್ಯ ಉಂಟಾಗಿ ನಾನು ಹೋಗಬೇಕಿತ್ತು. ಆದರೆ, ನನಗೆ ಪೇಸ್ ಮೇಕರ್ ಹಾಕಿಸಿ ನನ್ನನ್ನು ಎರಡು ಬಾರಿ ಅವನು ಉಳಿಸಿಕೊಂಡ. ಆದರೆ, ನನ್ನಿಂದ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವುಕರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post