ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಸ್ವತಃ ಅವರೇ ಸ್ಪಷ್ಠೀಕರಣ ನೀಡಿದ್ದಾರೆ.

ಈ ಕುರಿತಂತೆ ವೀಡಿಯೋ ಸಂದೇಶದ ಮೂಲಕ ಸ್ಪಷ್ಠೀಕರಣ ನೀಡಿರುವ ಅವರು, ನನ್ನ ಫೋಟೋ ಹಾಕಿ ಆರ್‌ಐಪಿ ಎಂದು ಬರೆದು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಇದೊಂದು ಸುಳ್ಳು ಸುದ್ಧಿಯಾಗಿದೆ. ನಾನಿನ್ನು ಬದುಕಿದ್ದು, ಕನ್ನಡಿಗರ ಆಶೀರ್ವಾದದಿಂದ ಆರೋಗ್ಯದಿಂದ ಇದ್ದೇನೆ. ಕಿಡಿಗೇಡಿಗಳ ಈ ತಪ್ಪು ಸಂದೇಶವನ್ನು ನಾಡಿನ ಜನರು ನಂಬಬಾರದು. ತನಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಬೆಳೆಸಿದ ಅಭಿಮಾನಿಗಳು, ನನ್ನ ಕನ್ನಡ ನಾಡಿನ ಜನರ ಪ್ರೀತಿಯ ಆಶೀರ್ವಾದ ಸದಾ ನನ್ನನ್ನು ಕಾಪಾಡುತ್ತದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















