ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೋದಾವರಿಯಿಂದ ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ #Kaveri ನದಿ ಪಾತ್ರಗಳ ರಾಜ್ಯಗಳಿಗೆ ನೀರು ಹಂಚಿಕೆಯಲ್ಲಿ ಕೇಂದ್ರ ಸರಕಾರವು #Central Government ಕರ್ನಾಟಕಕ್ಕೆ ಸೊನ್ನೆ ಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ #Former CM Kumaraswamy ಅವರು ಗಂಭೀರ ಆರೋಪ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿ, ಇದೇ ತಿಂಗಳ 18ರಂದು ದೆಹಲಿಯಲ್ಲಿ ನಡೆದ ಕೇಂದ್ರ ಜಲ ಆಯೋಗದ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯೊಬ್ಬರು ಭಾಗವಹಿಸಿದ್ದರು. ಅವರ ಉಪಸ್ಥಿತಿಯಲ್ಲೇ 242 ಟಿಎಂಸಿ ನೀರನ್ನು ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ಮಾತ್ರ ಹಂಚಿಕೆ ಮಾಡಿಕೊಂಡಿದ್ದು, ರಾಜ್ಯಕ್ಕೆ ಕನಿಷ್ಠ ಒಂದು ಕ್ಯೂಸೆಕ್ ನೀರನ್ನು ಕೂಡ ಹಂಚಿಕೆ ಮಾಡಿಲ್ಲ. ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಹಾಗೂ ಆಡಳಿತಾರೂಢ ಬಿಜೆಪಿ #BJP ಸರಕಾರಕ್ಕೆ ಈ ವಿಷಯ ಗೊತ್ತಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
Also read: ಕುವೆಂಪು ವಿವಿಯಲ್ಲಿ 2 ದಿನ ಸುಳ್ಳುಸುದ್ದಿಗಳ ನೈಜತೆ ಪರಿಶೀಲನಾ ಕಾರ್ಯಾಗಾರ
ಮೂರು ದಿನಗಳ ಹಿಂದೆ ಈ ಸಭೆ ನಡೆದಿದೆ. ಆದರೆ ಇಲ್ಲಿ ಮುಖ್ಯಮಂತ್ರಿಗಳು ಮಾತ್ರ, ರಾಜ್ಯಗಳ ಸಹಮತ ಪಡೆದು ನೀರು ಹಂಚಿಕೆ ಮಾಡಬೇಕು, ಡಿಪಿಆರ್ ಮಾಡುವ ಮುನ್ನ ನಮ್ಮೊಂದಿಗೆ ಚರ್ಚೆ ನಡೆಸಬೇಕು. ಈಗ ಆಗಿರುವ ತೀರ್ಮಾನಗಳನ್ನು ನಾವು ಒಪ್ಪಲಿಕ್ಕೆ ತಯಾರಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಯಾವ ಡಿಪಿಆರೂ ಇಲ್ಲ, ಯಾವ ಚರ್ಚೆಯೂ ಇಲ್ಲ. ಅವರವರೇ ಕೂತು ನೀರು ಹಂಚಿಕೆ ಮಾಡಿಕೊಂಡಿದ್ದಾರೆ. ಸದನದಲ್ಲಿ ಈ ವಿಷಯದ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ 92 ಟಿಎಂಸಿ, ಆಂಧ್ರ ಪ್ರದೇಶಕ್ಕೆ 90 ಟಿಎಂಸಿ, ತೆಲಂಗಾಣಕ್ಕೆ 60 ಹಂಚಿಕೊಂಡಿದ್ದಾರೆ. ರಾಜ್ಯಕ್ಕೆ ಇಂಥ ಘೋರ ಅನ್ಯಾಯವಾಗಿದ್ದರೆ ಕಾಂಗ್ರೆಸ್ ನಾಯಕರು ಮೇಕೆದಾಟು ಉಳಿಸ್ತೀವಿ ಎಂದು ಪಾದಯಾತ್ರೆ ಹೊರಟಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಇದೆಲ್ಲವೂ ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಎಲ್ಲಿ ನಾವು ಸರಕಾರದ ಮೇಲೆ ಮುಗಿಬೀಳುತ್ತೇವೋ ಎನ್ನುವ ಕಾರಣಕ್ಕೆ ಕಲಾಪ ನಡೆಯದಂತೆ ನೋಡಿಕೊಂಡರು ಎಂದು ಹೆಚ್ʼಡಿಕೆ ಕಿಡಿಕಾರಿದರು.
Also read: ಗಲಭೆ ಹಿನ್ನೆಲೆ: ಶಿವಮೊಗ್ಗಕ್ಕೆ 7 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ
ಆ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಅಧಿಕಾರಿಯೊಬ್ಬರು ಆಕ್ಷೇಪ ಎತ್ತಿದಾಗ ಉಳಿದವರು, ನಿಮಗೆ ಎರಡನೇ ಹಂತದಲ್ಲಿ ಕೊಡುತ್ತೇವೆ ಎಂದು ಬಾಯಿ ಮುಚ್ಚಿಸಿದ್ದಾರೆ. ಕೇಂದ್ರ ಸರಕಾರಕ್ಕೆ ಕನ್ನಡಿಗರೇನು ಮಲತಾಯಿ ಮಕ್ಕಳಾ? ನಾವೇನೂ ಇವರ ಬಳಿ ಭಿಕ್ಷೆ ಬೇಡುತ್ತಿದ್ದೇವೆಯೇ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ನಮ್ಮ ನೀರು ನಮ್ಮ ಹಕ್ಕು, ಎಲ್ಲಿ ಹೋಯಿತು ಇವರ ಹೋರಾಟ. ಅಹೋರಾತ್ರಿ ಧರಣಿ ಬೇರೆ ಕೇಡು ಇವರಿಗೆ. ಮೊದಲು ವಿರೋಧ ಪಕ್ಷ ನಾಯಕರು ಹೋಗಿ ನದಿ ಜೋಡಣೆ ಯೋಜನೆಯಲ್ಲಿ ಆಗುತ್ತಿರುವ ನೀರು ಹಂಚಿಕೆ ಬಗ್ಗೆ ತಿಳಿದುಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಟಾಂಕ್ ಕೊಟ್ಟರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post