ಕಲ್ಪ ಮೀಡಿಯಾ ಹೌಸ್
ಮಹದೇವ ಪ್ರಕಾಶ್ ರಾಜಕಾರಣದ ಸ್ಥಿತ್ಯಂತರಗಳನ್ನು ಬಹಳವಾಗಿ ಗ್ರಹಿಸಿ ವಿಶ್ಲೇಷಣೆ ಮಾಡುತ್ತಿದ್ದವರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಗತಿಸಿದ ಪ್ರಮುಖ ಘಟನಾವಳಿಗಳ ದಿನಾಂಕವನ್ನು ಕರಾರುವಾಕ್ಕಾಗಿ ಹೇಳುತ್ತಿದ್ದವರು.
ಎಷ್ಟೋ ಬಾರಿ ಹೇಳುತ್ತಿದ್ದರು ಅದ ದೇವರು ನನಗೆ ನೀಡಿದ ಕೊಡುಗೆ ಎಂದು. ಆದರೆ ಅದಕ್ಕೆ ಪೂರಕ ಎಂಬಂತೆ ಅವರ ಅಧ್ಯಯನ ಶೀಲತೆ ಹೆಚ್ಚಾಗಿತ್ತು.
2016 ಮತ್ತು 2017 ರಲ್ಲಿ ನಾನು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಭಾನುವಾರ ಮಾಸಿಕ ಪತ್ರಿಕೆ ಯಲ್ಲಿ ಸಹಾಯಕ ಸಂಪಾದಕನಾಗಿ ಕಾರ್ಯ ನಿರ್ವಹಿದ್ದೆ.
ಅಲ್ಲಿ ಕೆಲಸ ಮಾಡಿದಷ್ಟು ದಿವಸ ಕಲೆತಿದ್ದು ಹೆಚ್ಚು. ಅವರೊಂದಿಗೆ ಮಾತನಾಡಿದ, ವಿಚಾರ ವಿನಿಮಯ ಮಾಡಿಕೊಂಡಿದ್ದು ಅಪಾರ.
ಭಾನುವಾರದ ಪತ್ರಿಕೆ ಯಲ್ಲಿ ನನ್ನದು ಲೇಖನಗಳು ಇರುತ್ತಿತ್ತು. ಬರವಣಿಗೆಯ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಎಂದು ಕಡಿವಾಣ ಹಾಕಿದವರಲ್ಲ. ಬರೆಯಲು ಮುಕ್ತ ಅವಕಾಶವನ್ನು ನನಗೆ ನೀಡಿದ್ದರು.
ರಾಜಕಾರಣದ ಆಗುಹೋಗುಗಳನ್ನು ಹೇಗೆ ಗ್ರಹಿಸಬೇಕು ಅದನ್ನು ಅಕ್ಷರ ರೂಪದ ಮೂಲಕ ಓದುಗರಿಗೆ ಮುಟ್ಟಿಸಬೇಕು ಎಂದು ನನಗೆ ಕಲಿಸಿದ ಗುರುಗಳು.
ಇಂದು ನಾನು ಮಾನ್ಯ ನಗರಾಭಿವೃದ್ಧಿ ಸಚಿವರಗೆ ಮಾಧ್ಯಮ ಸಮನ್ವಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿಲು ಅವರು ಒಬ್ಬ ಕಾರಣಕರ್ತರು.
ಅವರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಧಾನ ಸೌಧದ ಕಚೇರಿ ನಮ್ಮ ಸಚಿವರ ಕಚೇರಿ ಅಕ್ಕಪಕ್ಕದಲ್ಲಿ ಇತ್ತು. ಅಲ್ಲಿಯೂ ನಮ್ಮದು ನಿತ್ಯ ಭೇಟಿ ಮಾತುಕತೆ. ನಾನು ಎರಡೂ ಮೂರು ದಿನ ಕಾಣದೇ ಇದ್ದಾಗ ಹೇಳಿ ಕರೆಸಿಕೊಳ್ಳುವವರು.
ಅವರು ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಭಾನುವಾರದ ಕಚೇರಿಯಲ್ಲಿ ಒಂದು ಬಾರಿ ಮಾತ್ರ ಭೇಟಿ ಮಾಡಿ ಮಾತನಾಡುವ ಅವಕಾಶ ಸಿಕ್ಕಿತ್ತು.
ಮಾನಸಿಕವಾಗಿ ದೈಹಿಕವಾಗಿ ಹೆಚ್ಚು ಸದೃಢ ವಾಗಿ ಇದ್ದವರು. ಶಿಸ್ತು ಬದ್ಧ ಜೀವನ ಶೈಲಿ ಅವರದ್ದು. ಇಂದು ಅವರು ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಕೊರೋನಾ ಎಂಬ ಮಹಾಮಾರಿಗೆ ಇವರ ಬಲಿ ಬೇಕಾಯಿತೇ? ಆ ಮಹಾಮಾರಿಗೆ ನನ್ನ ಧಿಕ್ಕಾರ…
ದುಃಖತಪ್ತ ಶ್ರದ್ಧಾಂಜಲಿ…
ಡಿ.ಎಲ್. ಹರೀಶ್
ಪತ್ರಕರ್ತರು, ನಗರಾಭಿವೃದ್ಧಿ ಸಚಿವರ ಮಾಧ್ಯಮ ಕಾರ್ಯದರ್ಶಿ, ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post